ದಾಂಪತ್ಯಕ್ಕೆ 50, ಲೀಲಾದೇವಿ-ಪ್ರಸಾದ್ ದಂಪತಿಗೆ ಅಭಿನಂದನೆ
ದಾಂಪತ್ಯಕ್ಕೆ 50, ಲೀಲಾದೇವಿ-ಪ್ರಸಾದ್ ದಂಪತಿಗೆ ಅಭಿನಂದನೆ
ಸುವರ್ಣ ಬಹುಮುಖಿ ಅಭಿನಂದನಾ ಕೃತಿ ಬಿಡುಗಡೆ
ಮಠಾಧೀಶರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದ ಈ ಸನ್ಮಾನ-ಅಭಿನಂದನಾ ಸಮಾರಂಭದಲ್ಲಿ ದಂಪತಿಗಳಿಗೆ ಸುವರ್ಣ ಬಹುಮುಖಿ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಲಾಯಿತು. ಲೀಲಾದೇವಿ- ರೇಣುಕಾಪ್ರಸಾದ್ ಅಭಿನಂದನಾ ಸಮಿತಿ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು .
ಪ್ರೀತಿ ವಿಶ್ವಾಸ ತುಂಬಿದ ಅಕ್ಕ ಎಂದು ಲೀಲಾದೇವಿ ಅವರನ್ನು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಬಣ್ಣಿಸಿದರು. ಸುವರ್ಣ ಬಹುಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ವಿಮರ್ಶಕ ಎಲ್.ಎಸ್.ಶೇಷಗಿರಿ ರಾವ್- ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬಂದ ಮಹಿಳೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮಾಜಿ ಸಚಿವೆಯ ಗುಣಗಾನ ಮಾಡಿದರು.
ಬೇಲಿಮಠದ ಶಿವರುದ್ರ ಸ್ವಾಮಿ, ಕೊಳದ ಮಠದ ಡಾ.ಶಾಂತವೀರಸ್ವಾಮಿ, ಶಿವಗಂಗೆ ಮೇಲಣ ಗವಿಮಠದ ಪಟ್ಟದ ವಲಯ ಶಾಂತಮುನಿ ದೇಶಿಕೇಂದ್ರ ಸ್ವಾಮಿ, ಹಿರೇಮಠದ ಡಾ. ಶಿವಾಚಾರ್ಯ ಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications