ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲಿ ಕೆ.ಆರ್‌. ಆಸ್ಪತ್ರೆಯಲ್ಲಿ ಹೆಣಗಳ್ಳರ ಜಾಲ ಪತ್ತೆ

By Staff
|
Google Oneindia Kannada News

ಮೈಸೂರಿನಲಿ ಕೆ.ಆರ್‌. ಆಸ್ಪತ್ರೆಯಲ್ಲಿ ಹೆಣಗಳ್ಳರ ಜಾಲ ಪತ್ತೆ
ಸಲೀಂ ಬಳಿ ಸಿಕ್ಕ ಕಾಗದ ಹೇಳುವಂತೆ ಕಾಸಿಗಾಗಿ ಹೆಣ ಮಾರಿಕೊಂಡವರು...

ಹಣಕ್ಕಾಗಿ ಏನಲ್ಲ ಮಾಡುವುದಕ್ಕೆ ಸಾಧ್ಯ? ದುಡಿಮೆ, ಬೆಲೆಬಾಳುವ ವಸ್ತುಗಳ ಮಾರಾಟ, ಮನುಷ್ಯರ ಮಾರಾಟ, ಕಳ್ಳತನ, ದರೋಡೆ, ದಗಾ,ಸುಲಿಗೆ... ಊಹ್‌ ಎಷ್ಟು ದಾರಿಗಳಿವೆ !

ಆದರೆ ಮೈಸೂರಿನಲ್ಲಿ ಹಣಕ್ಕೋಸ್ಕರ ಶವಗಳನ್ನು ಕದಿಯುವವರನ್ನು ಪತ್ತೆ ಹಚ್ಚಲಾಗಿದೆ. ಹಣಕ್ಕಾಗಿ ಹೆಣ ಮಾರಿದ ಆರೋಪದ ಮೇಲೆ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ನಗರದ ಕೆ. ಆರ್‌. ಆಸ್ಪತ್ರೆಯ ಶವಾಗಾರದಲ್ಲಿದ್ದ ಅಥ ಶವಗಳು ಇದ್ದಕ್ಕಿದ್ದ ಹಾಗೇ ಮಾಯವಾಗುತ್ತಿದ್ದವು. ಆದರೆ ಆ ಶವಗಳು ಅನಾಥವಾಗಿ ಸುಮಾರು ವರ್ಷಗಳಿಂದ ಆಸ್ಪತ್ರೆಯಲ್ಲೇ ಇದ್ದುದರಿಂದ ಈ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿರಲಿಲ್ಲ.

ಜು. 4ರ ಶುಕ್ರವಾರ ಟ್ಯಾಕ್ಸಿಯಾಂದರಲ್ಲಿ ನಾಲ್ಕು ಶವಗಳನ್ನು ಸಾಗಿಸುತ್ತಿದ್ದ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಹೇಳಿದ ಸತ್ಯಗಳು ತೀರಾ ಅಮಾನವೀಯವಾದುದು. ಆತನ ಬಳಿ ಎರಡು ಪತ್ರಗಳೂ ಲಭ್ಯವಿದ್ದು, ಅವು ಮಂಡರಗಿ ಮತ್ತು ಹಾವೇರಿ ಆಯುರ್ವೇದಿಕ್‌ ಕಾಲೇಜ್‌ ಪ್ರಿನ್ಸಿಪಾಲರನ್ನು ಉದ್ದೇಶಿಸಿ ಕೆ. ಆರ್‌. ಆಸ್ಪತ್ರೆಯ ಹಾಲಿ ಶವ ಪರೀಕ್ಷಕ ಡಾ. ಪಾಂಡುರಂಗ ಶೆಣೈ ಹಾಗೂ ಇತ್ತೀಚೆಗೆ ನಿವೃತ್ತರಾದ ಡಾ. ರವಿಚಂದ್ರನ್‌ ಬರೆದುದಾಗಿತ್ತು.

ನಾಲ್ಕು ಶವಗಳನ್ನು ವೈದ್ಯಕೀಯ ಪರೀಕ್ಷೆಗೆ ಬಳಸುವಂತೆ ಹಾಗೂ ಅದರ ಸಾಗಾಣಿಕಾ ವೆಚ್ಚವನ್ನು ಸಲೀಂ ಬಳಿ ಕೊಡುವಂತೆ ಪತ್ರದಲ್ಲಿ ಸೂಚಿಸಲಾಗಿತ್ತು. ವಿಚಿತ್ರ ಎಂದರೆ ಪಾಂಡುರಂಗ ಶೆಣೈ ಈ ಪತ್ರವನ್ನು ತಾವು ಬರೆಯಲೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತನಿಖೆ ಮುಂದುವರೆಸಿರುವ ಪೊಲೀಸರು ಹೆಣ ಕಳ್ಳತನ ಪ್ರಕರಣದ ಹಿಂದೆ ವ್ಯವಸ್ಥಿತ ಜಾಲವೊಂದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X