ಕರ್ನಾಟಕದ ಮಳೆ ಬಿತ್ತನೆ ಸಾಹಸಕ್ಕೆ ಆಂಧ್ರಪ್ರದೇಶದಲ್ಲಿ ಅಪಸ್ವರ

ಕರ್ನಾಟಕದ ಮಳೆ ಬಿತ್ತನೆ ಸಾಹಸಕ್ಕೆ ಆಂಧ್ರಪ್ರದೇಶದಲ್ಲಿ ಅಪಸ್ವರ
‘ನೈಋತ್ಯ ದಿಕ್ಕಿನಲ್ಲಿ ಮೋಡ ಕರಗಿಸಿದರೆ ರಾಯಲಸೀಮೆಯಲ್ಲಿ ಮಳೆ ಬರೋಲ್ಲ’

ಹೈದರಾಬಾದ್‌ : ಪರಗೋಡು ನೀರಿನ ವಿಷಯಕ್ಕೆ ತಗಾದೆ ತೆಗೆದ ಆಂಧ್ರಪ್ರದೇಶ ಈಗ ಕರ್ನಾಟಕದ ಕೃತಕ ಮಳೆ ತರಿಸುವ ಸಾಹಸಕ್ಕೂ ಅಡ್ಡಗಾಲಿಕ್ಕುವ ಹಾಗೆ ಕಾಣುತ್ತಿದೆ.

ಕರ್ನಾಟಕದ ನೈಋತ್ಯ ದಿಕ್ಕಿನಲ್ಲಿ ಮೋಡಗಳ ಕರಗಿಸಿ ಮಳೆ ಸುರಿಸಿದರೆ ನಮ್ಮ ರಾಯಲಸೀಮೆಗೆ ಮಳೆಯೇ ಬರೋದಿಲ್ಲ ಅಂತ ಆಂಧ್ರಪ್ರದೇಶದ ಹವಾಮಾನ ಇಲಾಖೆಯ ಮಂದಿ ವಾದಿಸುತ್ತಿದ್ದಾರೆ.

ಮೈಸೂರು ಮತ್ತು ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಮಳೆ ಬಿತ್ತನೆ ನಡೆಸಲು ಕರ್ನಾಟಕ ಜಾಗತಿಕ ಟೆಂಡರ್‌ ಕರೆದಿದೆ. ಈ ಪ್ರದೇಶಗಳಲ್ಲಿ ಮಳೆ ಸುರಿಸಲು ನೈಋತ್ಯ ದಿಕ್ಕಿನ ಮೋಡಗಳ ಜೊತೆ ಕರ್ನಾಟಕ ಆಟವಾಡುತ್ತದೆ. ಹಾಗಾದಾಗ ಸುತ್ತಮುತ್ತಲ ಮೋಡಗಳ ತೇವಾಂಶ ಖಾಲಿಯಾಗುತ್ತದೆ. ಪರಿಣಾಮ ಅನಂತಪುರ, ಕರ್ನೂಲು, ಮೆಹಬೂಬ್‌ನಗರ ಮತ್ತು ಕಡಪಾ ಪ್ರದೇಶಗಳಿಗೆ ಮಳೆ ಬರದಿರುವ ಅತಂಕವಿದೆ ಎಂದು ಆಂಧ್ರಪ್ರದೇಶದ ಹವಾಮಾನ ಇಲಾಖೆ ಹೇಳುತ್ತಿದೆ.

ಈಗಾಗಲೇ ಬರದಿಂದ ತತ್ತರಿಸಿ ಹೋಗಿರುವ ರಾಯಲಸೀಮೆ ಕರ್ನಾಟಕದ ಮಳೆ ಬಿತ್ತನೆಯಿಂದ ಇನ್ನಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ. ಕರ್ನಾಟಕದ ಮಳೆ ಬಿತ್ತನೆ ಕೆಲಸ ತರವಲ್ಲ ಎಂಬ ಸೊಲ್ಲು ಆಂಧ್ರ ಸರ್ಕಾರದವರ ಬಾಯಲ್ಲಿ ಜೋರಾಗುತ್ತಿದೆ.

ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಇನ್ನೊಂದು ಪರೀಕ್ಷೆಗೆ ಸನ್ನದ್ಧವಾಗಬೇಕೋ ಏನೋ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಕರ್ನಾಟಕದಲ್ಲಿ ಮಳೆ ಬಿತ್ತನೆ

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+