ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರಿನ್‌ ಟೂರ್‌ಗೆ ಕೇಂದ್ರ ಎಡರು- ಇನಾಂದಾರ್‌ ದೂರು

By Staff
|
Google Oneindia Kannada News

ಫಾರಿನ್‌ ಟೂರ್‌ಗೆ ಕೇಂದ್ರ ಎಡರು- ಇನಾಂದಾರ್‌ ದೂರು
ಕೇಂದ್ರ ಸರ್ಕಾರವನ್ನು ರಾಜ್ಯ ಕಾಂಗ್ರೆಸ್‌ ತರಾಟೆಗೆ ತೆಗೆದುಕೊಳ್ಳುವುದು ಜೋರಾಗಿದೆ

ಬೆಂಗಳೂರು : ವಿದೇಶೀ ಪ್ರವಾಸಕ್ಕೆ ಹೋಗಲು ಅನುಮತಿ ಕೊಡುವುದರಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಖಂಡಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೂಡ ಇದೇ ವಿಷಯಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ನ್ಯೂಯಾರ್ಕ್‌ನಲ್ಲಿ ಜೂನ್‌ 18- 20ನೇ ತಾರೀಕಿನವರೆಗೆ ನಡೆದ ಉದ್ದಿಮೆ ಪ್ರದರ್ಶನ ಮೇಳದಲ್ಲಿ ಕೇಂದ್ರ ಸರ್ಕಾರದ ಈ ವಿಳಂಬ ನೀತಿಯಿಂದಲೇ ತಾವು ಭಾಗವಹಿಸಲಿಕ್ಕೆ ಸಾಧ್ಯವಾಗಲಿಲ್ಲ ಎಂಬುದು ಇನಾಂದಾರ್‌ ದೂರು. ಬೆಂಗಳೂರು ಐಟಿ ರಾಜಧಾನಿ. ಇಲ್ಲಿಗೆ ದೇಶ ವಿದೇಶಗಳ ಕಂಪನಿಗಳವರು ಬಂದು ಹೋಗುತ್ತಾರೆ. ಅವರಿಂದ ದೇಶಕ್ಕೆ ಬಂಡವಾಳ ತರಬೇಕಾದರೆ ಅಲ್ಲಿಗೆ ಹೋಗಬೇಕಾದ್ದು ಅನಿವಾರ್ಯ. ನಮ್ಮ ಮೂಲಭೂತ ಸೌಕರ್ಯಗಳನ್ನು ಅವರಿಗೆ ಪರಿಚಯ ಮಾಡಿಸದಿದ್ದರೆ ಬಂಡವಾಳ ಹೇಗೆ ಬಂದೀತು ಹೇಳಿ ಎಂದು ಇನಾಂದಾರ್‌ ಪ್ರಶ್ನಿಸಿದರು.

ಜೂನ್‌ 22ರಿಂದ 25ರವರೆಗೆ ಬೆಂಗಳೂರಲ್ಲಿ ನಡೆದ ಬಯೋ- 2003 ಮೇಳದಲ್ಲಿ ಕೆಲವು ಕಂಪನಿಗಳು ಕೊಟ್ಟಿರುವ ಬಂಡವಾಳ ಹೂಡಿಕೆಯ ಭರವಸೆಯನ್ನು ಇನಾಂದಾರ್‌ ಗುರುವಾರ (ಜು.03) ಸುದ್ದಿಗಾರರಿಗೆ ತಿಳಿಸಿದರು. ಇನ್ಫೋ ದೇವ್‌ ಎಂಬ ವಿಶ್ವ ಬ್ಯಾಂಕ್‌ನ ವಿಭಾಗೀಯ ಕಂಪನಿ ರಾಜ್ಯದ ಜೊತೆ ಸೇರಿ ಐಸಿಟಿಇ ಇನ್‌ಕ್ಯುಬೇಟರ್‌ಗಳನ್ನು ಸ್ಥಾಪಿಸಲು ಸಿದ್ಧವಿದೆ. ಕುಮಟಾದಲ್ಲಿ ಜೈವಿಕ ಜಲಾಂತರ್ಗಾಮಿ ಕೇಂದ್ರ ತೆರೆಯಲು ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ಪ್ರಸ್ತಾವನೆ ನೀಡಿದೆ. ಇನ್ನಷ್ಟು ಕಂಪನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿವೆ ಎಂದು ಇನಾಂದಾರ್‌ ಹೇಳಿದರು.

ಕೇಂದ್ರದತ್ತ ಕರ್ನಾಟಕದ ಕಿಡಿನೋಟ ಜಾಸ್ತಿಯಾದದ್ದು ಯಾಕೆ?
ಬುಧವಾರ ಕಾಂಗ್ರೆಸ್‌ ಪಕ್ಷದ ಅಲ್ಲಂ ವೀರಭದ್ರಪ್ಪ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ಪೂಜಾರಿ ಬಿಜೆಪಿ ಪಕ್ಷ ಕೇಂದ್ರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದರು. ಈಗ ಇನಾಂದಾರ್‌ ಪಾಳಿ. ವಾರದಿಂದ ಮುಖ್ಯಮಂತ್ರಿ ಕೃಷ್ಣ ಕೂಡ ಕೇಂದ್ರ ಸರ್ಕಾರದತ್ತ ಕೆಂಗಣ್ಣು ಬೀರುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಕೇವಲ ಒಂದೂವರೆ ವರ್ಷ ಬಾಕಿಯಿದೆ. ನಾಗರಿಕರು ಎಲ್ಲರ ರಾಜಕೀಯ ಕಸರತ್ತುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬರಬರುತ್ತಾ ರಾಡಿ ಎರಚುವಿಕೆ ಇನ್ನಷ್ಟು ಅತಿಯಾದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಫಾರಿನ್‌ ಟೂನ್‌ ಮಿಸ್ಸಾಗುತ್ತಿರುವುದಕ್ಕೆ ಕೃಷ್ಣ ಹಾಗೂ ಇನಾಂದಾರ್‌ಗೆ ಬಲು ಬೇಜಾರಾಗಿದೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X