ಏಕರೂಪ ಶಾಸನದಡಿ ಉಡುಪಿ ಮಠಗಳ ಸೇರ್ಪಡೆಗೆ ವಿರೋಧ

ಏಕರೂಪ ಶಾಸನದಡಿ ಉಡುಪಿ ಮಠಗಳ ಸೇರ್ಪಡೆಗೆ ವಿರೋಧ
ಸರ್ಕಾರಿ ಆದೇಶದ ವಿರುದ್ಧ ಉಡುಪಿ ಅಷ್ಠಮಠಶ್ರೀಗಳ ಒಗ್ಗಟ್ಟು

ಉಡುಪಿ : ಉಡುಪಿ ಮಠ , ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನವನ್ನು ಏಕ ರೂಪ ಶಾಸನದಡಿ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯಪತ್ರ ಮೂಲಕ(ಗಜೆಟ್‌) ಆದೇಶ ಹೊರಡಿಸಿದ್ದು , ಈ ಆದೇಶವನ್ನು ಅಷ್ಠ ಮಠಗಳ ಯತಿಗಳು ವಿರೋಧಿಸಿದ್ದಾರೆ.

ಹೊಸದಾಗಿ ರೂಪಿಸಿರುವ ದೇವಸ್ಥಾನಗಳ ಏಕ ರೂಪ ಶಾಸನದಡಿ-, ಉಡುಪಿಯ ಶ್ರೀ ಕೃಷ್ಣ ಮಠ ಹಾಗೂ ಅದರ ಅಧೀನದಡಿ ಇರುವ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನಗಳನ್ನು ಪರಿಗಣಿಸಿ ಸರಕಾರ ಹೊರಡಿಸಿರುವ ಆದೇಶವನ್ನು ಅಷ್ಟ ಮಠಗಳ ಯತಿಗಳು ವಿರೋಧಿಸಿದ್ದಾರೆ.

ಅಷ್ಟಮಠಗಳ ಯತಿಗಳು ಹಾಗೂ ಉಡುಪಿ ಮಠಗಳ ಭಕ್ತಾದಿಗಳು ಈ ಆದೇಶದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಷ್ಟ ಮಠಗಳು ಉಡುಪಿ ಕೃಷ್ಣ ಮಠದ ಅಧೀನದಲ್ಲಿರುವ ಮಠಗಳಾಗಿವೆ. ಶ್ರೀಕೃಷ್ಣ ದೇವಳ ಎಂದು ಕರೆಸಿಕೊಳ್ಳುವ ಕೃಷ್ಣ ಮಠವನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದು, ಇದನ್ನು ದೇವಸ್ಥಾನಗಳ ಏಕ ರೂಪ ಶಾಸನದಡಿ ತರಲಿಕ್ಕಾಗದು ಎಂದು ಅಷ್ಟ ಮಠದ ಯತಿಗಳು ಪ್ರತಿಪಾದಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+