ಕರ್ನಾಟಕ ಪೂರ್ಣ ಸಾರ್ಸ್ ಮುಕ್ತ , ಶುರುವಾಯ್ತು ಡೆಂಗ್ಯೂಕಾಟ
ಕರ್ನಾಟಕ ಪೂರ್ಣ ಸಾರ್ಸ್ ಮುಕ್ತ , ಶುರುವಾಯ್ತು ಡೆಂಗ್ಯೂಕಾಟ
ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಸಾರ್ಸ್ ಪರೀಕ್ಷೆಯ ತಾಪತ್ರಯ ಇಲ್ಲ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ಸೋಮವಾರ (ಜೂ.30) ಈ ವಿಷಯ ತಿಳಿಸಿದರು. ರಾಜ್ಯದಲ್ಲೀಗ ಸಾರ್ಸ್ ಭೀತಿ ಸಂಪೂರ್ಣ ಮಾಯವಾಗಿದೆ. ಮೇ 12ನೇ ತಾರೀಕಿನಿಂದ ಈವರೆಗೆ ಒಂದೇ ಒಂದು ಸಾರ್ಸ್ ಪ್ರಕರಣವೂ ಪತ್ತೆಯಾಗಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಈವರೆಗೆ ಒಟ್ಟು 36 ಸಾವಿರದ 475 ಪ್ರಯಾಣಿಕರನ್ನು ಪರೀಕ್ಷಿಸಿದ್ದೇವೆ ಎಂದು ಸಚಿವರು ಹೇಳಿದರು.
ಕೋಲಾರದಲ್ಲಿ ಡೆಂಗ್ಯೂ ಭೀತಿ : ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಟ್ಟು 450 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆರೋಗ್ಯಾಧಿಕಾರಿಗಳು ಶ್ರೀನಿವಾಸಪುರಕ್ಕೆ ತೆರಳಿದ್ದು, ಪರಿಸ್ಥಿತಿಯ ಸ್ಥೂಲ ಚಿತ್ರಣ ಸಂಗ್ರಹಿಸುತ್ತಿದ್ದಾರೆ. ಬಳ್ಳಾರಿ ಹಾಗೂ ಬಿಜಾಪುರ ಜಿಲ್ಲೆಗಳಲ್ಲೂ ಆರೋಗ್ಯಾಧಿಕಾರಿಗಳು ಡೆಂಗ್ಯೂ ಜ್ವರದ ಬಗ್ಗೆ ನಿಗಾ ವಹಿಸಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications