ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್ ಪಡೆಯ ಕಾವಲು !
ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್ ಪಡೆಯ ಕಾವಲು !
ಬೆಂಗಳೂರಿಗೆ ಕುಡಿವ ನೀರು ಸರಬರಾಜು ಮಾಡಲು ತ್ರಾಸಪಡುತ್ತಿರುವ ಸರಕಾರ
ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಆಗುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಇರುವ ಜಲ ಶುದ್ಧೀಕರಣ ಘಟಕಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ. ಟಿ. ಕೆ. ಹಳ್ಳಿಗೆ ನೀರು ಪೂರೈಕೆ ಮಾಡುವ ನೆಟ್ಕಲ್ ಕೆರೆಗೆ ಕಬಿನಿಯಿಂದ ನೀರು ಬಿಡಲಾಗಿದ್ದು, ಅತ್ಯಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.
ಕಬಿನಿಯಿಂದ ಕಾಲುವೆಗಳ ಮೂಲಕ ಬಿಟ್ಟಿರುವ ನೀರನ್ನು ಗುಡ್ಡಗಾಡು ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸದಂತೆ ಅಲ್ಲಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಿ, ನೀರು ಹರಿಯುವಿಕೆಯನ್ನು ಎಚ್ಚರಿಕೆಯಿಂದ ರಕ್ಷಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications