ನಕ್ಕೀರನ್ ಗೋಪಾಲ್ ಈಗ ಸಿಐಡಿ ಪೊಲೀಸರ ಅತಿಥಿ
ಚೆನ್ನೈ : ತಮಿಳು ನಿಯತಕಾಲಿಕ ‘ನಕ್ಕೀರನ್’ ಸಂಪಾದಕ ಆರ್.ಆರ್.ಗೋಪಾಲ್ ಈಗ ಪೊಲೀಸರ ಅತಿಥಿ. ತಮಿಳುನಾಡು ಸಿಐಡಿ ಪೊಲೀಸರು ಶುಕ್ರವಾರ (ಏ.11) ರಾತ್ರಿ ಈತನನ್ನು ಬಂಧಿಸಿದರು.
ಕಾಡುಗಳ್ಳ ವೀರಪ್ಪನ್ ಶಿಕಾರಿಯ ಹಾದಿಯಲ್ಲಿ ಕೆಲವು ಮಹತ್ತರ ವಿಷಯಗಳನ್ನು ಹೆಕ್ಕುವ ಸಲುವಾಗಿ ಈತನನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ. ಇಂಥವೇ ನಿರ್ದಿಷ್ಟ ಪ್ರಕರಣಗಳಿಗೆ ಈತನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಕೊಟ್ಟಿಲ್ಲ.
ಕಾಡುಗಳ್ಳ ವೀರಪ್ಪನ್ ಸಂದರ್ಶನವನ್ನು ಮೊದಲ ಬಾರಿಗೆ ಪ್ರಕಟಿಸಿ ಮಿಂಚಿದ ಗೋಪಾಲ್, ವರನಟ ರಾಜ್‌ಕುಮಾರ್ ಬಿಡುಗಡೆಗಾಗಿ ಹಲವಾರು ಬಾರಿ ವೀರಪ್ಪನ್ ಜತೆ ಮಾತುಕತೆ ನಡೆಸಿದ್ದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications