ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಐಟಿ ಸಾಧನೆಗೆ ‘ಪರಮ್‌ ಪದ್ಮಾ’ ಗರಿ

By Staff
|
Google Oneindia Kannada News

ಬೆಂಗಳೂರು : ಒಂದು ಟೆರಾಫ್ಲಾಪ್‌ ಗಣಕ ಸಾಮರ್ಥ್ಯದ ಪರಮ್‌ ಪದ್ಮಾ ಎಂಬ ಸೂಪರ್‌ ಕಂಪ್ಯೂಟರ್‌ನ್ನು ತಯಾರಿಸಿರುವ ಸಿ-ಡಾಕ್‌ ಸಂಸ್ಥೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಇನ್ನೊಂದು ಅಂತರರಾಷ್ಟ್ರೀಯ ಗರಿಮೆ ತಂದುಕೊಟ್ಟಿದೆ.

ದೇಶದ ಅತ್ಯಂತ ಶಕ್ತಿಯುತ ಕಂಪ್ಯೂಟರ್‌ ಪರಮ್‌ ಪದ್ಮಾವನ್ನು ಕೇಂದ್ರ ಐಟಿ ಸಚಿವ ಅರುಣ್‌ ಶೌರಿ ಮಂಗಳವಾರ ದೇಶಕ್ಕೆ ಸಮರ್ಪಿಸಿದರು. ಸಿ-ಡಾಕ್‌( ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌) 1980ರ ದಶಕದಲ್ಲಿ ನಿರ್ಮಿಸಿದ ಪರಮ್‌ 8000ಕ್ಕಿಂತಪರಮ್‌ ಪದ್ಮಾ ಒಂದು ಸಾವಿರ ಪಟ್ಟು ಹೆಚ್ಚು ಸಾಮರ್ಥ್ಯ ಪಡೆದಿದೆ.

ಅಮೆರಿಕಾ, ಜಪಾನ್‌, ಇಸ್ರೇಲ್‌ ಮತ್ತು ಚೀನಾದಲ್ಲಿಮಾತ್ರ ಇಂತಹ ಕಂಪ್ಯೂಟರ್‌ಗಳಿವೆ. ಪರಮ್‌ ಪದ್ಮಾ ತಯಾರಿಕೆಯಿಂದ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನ ಪಡೆದಿದೆ ಎಂದು ಸಿ- ಡಾಕ್‌ನ ನಿರ್ವಾಹಕ ನಿರ್ದೇಶಕ ಆರ್‌. ಕೆ. ಆರೋರಾ ಹೇಳಿದ್ದಾರೆ.

ಹವಾಮಾನ ಭವಿಷ್ಯ, ಬಾಹ್ಯಾಕಾಶ ತಂತ್ರಜ್ಞಾನ, ಬಯೋಇನ್ಫೋಮಾಟಿಕ್ಸ್‌ನಂತಹ ಮತ್ತಿತರ ಉನ್ನತ ತಂತ್ರಜ್ಞಾನಗಳಿಗಾಗಿ ಈ ಪರಮ್‌ ಪದ್ಮಾ ಕಂಪ್ಯೂಟರ್‌ ನೆರವಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X