ಕಾಶಿ-ಮಥುರಾದಲ್ಲೂ ಹಕ್ಕುದಾರಿಕೆಗೆ ವಿಹೆಚ್‌ಪಿ ಯತ್ನ
ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿವಾದ ರಹಿತ ಭೂಮಿಗಾಗಿ ಆಗ್ರಹಿಸುತ್ತಿರುವ ವಿಶ್ವ ಹಿಂದೂ ಪರಿಷತ್, ಕಾಶಿ ಹಾಗೂ ಮಥುರಾದಲ್ಲೂ ಜಾಗ ತೆರವು ಮಾಡುವಂತೆ ಮುಸ್ಲಿಮರನ್ನು ಒತ್ತಾಯಿಸಿದೆ.
ಅಯೋಧ್ಯೆಯ ವಿವಾದ ರಹಿತ ಭೂಮಿಯನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿ ಒಂದು ವಾರದ ಸತ್ಯಾಗ್ರಹವನ್ನು ಆರಂಭಿಸಿರುವ ವಿಶ್ವಹಿಂದೂ ಪರಿಷತ್ ಕಾಶಿ ಮತ್ತು ಮಥುರಾ ದೇವಾಲಯಗಳ ಪಕ್ಕದ ಭೂಮಿಯನ್ನು ತೆರವುಗೊಳಿಸುವಂತೆ ಮುಸ್ಲಿಮರಿಗೆ ಸೂಚಿಸಿತು. ಸತ್ಯಾಗ್ರಹ ನಡೆಸುತ್ತಿದ್ದ ನೂರಾರು ವಿಹೆಚ್‌ಪಿ ಕಾರ್ಯಕರ್ತರನ್ನು ಗುರುವಾರ ಪೊಲೀಸರು ಬಂಧಿಸಿದರು.
ಸತ್ಯಾಗ್ರಹಿಗಳನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ವಿಹೆಚ್‌ಪಿಯ ಅಂತರರಾಷ್ಟ್ರೀಯ ಮಹಾ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ, ಕಾಶಿ ಹಾಗೂ ಮಥುರಾ ದೇವಾಲಯಗಳು ಹಿಂದೂಗಳಿಗೆ ಸೇರಿದ್ದು ಎಂಬುದು ಸರ್ವವಿದಿತ. ಇದಕ್ಕಾಗಿ ಯಾವುದೇ ಉತ್ಖನನದ ಅವಶ್ಯಕತೆ ಇಲ್ಲ. ಆದ್ದರಿಂದ ಈ ದೇವಾಲಯದ ಪಕ್ಕದಲ್ಲಿರುವ ಭೂಮಿಯನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಮುಸ್ಲಿಮರನ್ನು ಆಗ್ರಹಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications