ಕೋಮು ಕುಮ್ಮಕ್ಕು ಕಾಂಗ್ರೆಸ್‌ದು-ಯಡಿಯೂರಪ್ಪ

ಉಡುಪಿ : ಅಲ್ಪಸಂಖ್ಯಾಕರು ಮತ್ತು ದಲಿತರ ಮೇಲೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ವಾಗ್ದಾಳಿ ಮಾಡುತ್ತಿದೆ. ಅದರ ಮೇಲೆ ಪೋಟಾ ಹೇರಬೇಕು ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಜನಾರ್ದನ ಪೂಜಾರಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವುದಕ್ಕೆ ಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ಯಡಿಯೂರಪ್ಪ, ಜನರಲ್ಲಿ ಕೋಮು ಭಾವನೆ ಹಬ್ಬಿಸುತ್ತಿರುವುದು ಕಾಂಗ್ರೆಸ್ಸು. ಆ ಪಕ್ಷದ್ದು ಓಟುಬ್ಯಾಂಕ್‌ ರಾಜಕೀಯ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮತ್ತು ಸಂಘ ಪರಿವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಗುರಿಗೆ ಅಂಟಿಕೊಂಡಿವೆ. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಈ ವಿಷಯದಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ- ಸುಪ್ರಿಂಕೋರ್ಟಿನ ಮುಂದಿರುವ ಕಾನೂನು ತೊಡಕುಗಳು ನಿವಾರಣೆಯಾಗಲಿ, ಆಮೇಲೆ ದೇವಸ್ಥಾನ ಕಟ್ಟೋಣ ಅನ್ನುವುದು ಬಿಜೆಪಿ ನಿಲುವು. ತ್ವರಿತವಾಗಿ ದೇವಳದ ನಿರ್ಮಾಣವಾಗಬೇಕು ಅನ್ನುವುದು ಸಂಘ ಪರಿವಾರದ ಕನಸು ಎಂದರು.

ಬರ ಅಧ್ಯಯನಕ್ಕೆ ಸಮಿತಿ ರಚಿಸಿ : ರಾಜ್ಯದಲ್ಲಿ ಬರ ಪರಿಸ್ಥಿತಿಯ ಸಮರ್ಪಕ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಎಪಿಎಂಸಿ ಸೆಸ್‌ನಲ್ಲಿನ ಹೆಚ್ಚಳವನ್ನು ಶೇ. 1 ರಿಂದ 2ಕ್ಕೆ ಹೆಚ್ಚಿಸಬೇಕು. ಬರ ಪರಿಹಾರ ಕಾಮಗಾರಿಯ ಸಲುವಾಗಿ ಕೇಂದ್ರ ಸರ್ಕಾರ 171 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಈ ಪೈಕಿ 25 ಕೋಟಿ ರುಪಾಯಿಯನ್ನೂ ರಾಜ್ಯ ಈವರೆಗೆ ಬಳಸಿಕೊಂಡಿಲ್ಲ ಎಂದು ಯಡಿಯೂರಪ್ಪ ದೂರಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+