ಒಂದೇ ದಿನ ಮೂರು ಗ್ರಹಗಳ ನಡೆಯಲ್ಲಿ ಬದಲಾವಣೆ: ನಾಲ್ಕು ರಾಶಿಯವರ ಜೀವನದಲ್ಲಿ ಆಗುವುದು ಭಾಗ್ಯೋದಯ

ಈ ವೈಶಾಖ ಅಮಾವಾಸ್ಯೆ ಬಹಳ ವಿಶೇಷವಾಗಿದೆ.ಏಪ್ರಿಲ್ 17 ಅಂದರೆ ಇಂದು ಗ್ರಹಗಳ ಚಲನೆಯಲ್ಲಿ ಆಗುವ ಬದಲಾವಣೆಗಳು ಸಾಮಾನ್ಯವಲ್ಲ.ಈ ಬದಲಾವಣೆಗಳು ಅನೇಕರ ಜೀವನದಲ್ಲಿ ಹೊಸ ಆರಂಭವಾಗಿರಬಹುದು.ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಸಿಗಬಹುದು.ಪ್ರಗತಿಯ ಬಾಗಿಲು ತೆರೆಯಬಹುದು. ಇಂದು, ಮಧ್ಯಾಹ್ನ 12:02 ಕ್ಕೆ ಸರಿಯಾಗಿ ಚಂದ್ರನು ಮೇಷ ರಾಶಿಗೆ ಕಾಲಿಡುತ್ತಿದ್ದಾನೆ. ಈ ಮೂಲಕ ಮೇಷ ರಾಶಿಯಲ್ಲಿ ಸೂರ್ಯ-ಚಂದ್ರನ ಸಂಯೋಗ ಸೃಷ್ಟಿಯಾಗುತ್ತದೆ. ಮತ್ತೊಂದೆಡೆ ಸಂಜೆ 4:05 ಕ್ಕೆ, ಶನಿಯು ಉತ್ತರಭಾದ್ರ ನಕ್ಷತ್ರದ ನಾಲ್ಕನೇ ಪಾದಕ್ಕೆ ಸಾಗುತ್ತಾನೆ.ಇದರ ಪ್ರಭಾವವು ನಾಲ್ಕು ರಾಶಿಯವರ ಮೇಲೆ ದೊಡ್ಡ ಮಟ್ಟದಲ್ಲಿ ಬೀರುತ್ತದೆ. ಗ್ರಹಗಳ ನಡೆಯಲ್ಲಿನ ಈ ಬದಲಾವಣೆ ಕೆಲವು ರಾಶಿಯವರ ಅದೃಷ್ಟವನ್ನು ಬದಲಿಸಬಹುದು.

ಈ ರಾಶಿಯವರ ಪಾಲಿಗೆ ಒಲಿಯುವುದು ಅದೃಷ್ಟ:

Three Planetary Transits Today

ಮೇಷ ರಾಶಿ:

ಮೇಷ ರಾಶಿಯಲ್ಲಿಯೇ ಸೂರ್ಯ ಮತ್ತು ಚಂದ್ರರು ಸಂಧಿಸುವುದರಿಂದ, ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚು ಶುಭ ಫಲ ಸಿಗುವುದು. ಬಾಕಿ ಉಳಿಸಿಕೊಂಡಿರುವ ಕೆಲಸಗಳೆಲ್ಲಾ ಈ ಹೊತ್ತಿನಲ್ಲಿ ಕೈಗೂಡುವುದು.ಉದ್ಯಮಿಗಳು ಪ್ರಮುಖ ವ್ಯಾಪಾರ ಒಪ್ಪಂದಗಳ ಮೂಲಕ ಲಾಭ ಪಡೆಯುವರು. ಉದ್ಯೋಗಿಗಳ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಯದಲ್ಲಿ ಏರಿಕೆ ಕಾಣುವುದು. ಆರ್ಥಿಕ ತೊಂದರೆಗಳು ಒಂದೊಂದಾಗಿಯೇ ನಿವಾರಣೆಯಾಗುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು.

Three Planetary Transits Today

ವೃಷಭ ರಾಶಿ:

ಮುಂಬರುವ ದಿನಗಳು ವೃಷಭ ರಾಶಿಯವರಿಗೆ ಹೆಚ್ಚು ಲಾಭದಾಯಕವಾಗಿರಲಿದೆ.ವೃತ್ತಿಜೀವನದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಸಿಗುವುದು.ಆರ್ಥಿಕವಾಗಿ ಭಾರೀ ಲಾಭವಾಗುವುದು. ಹಣಕಾಸಿನ ಸಮಸ್ಯೆಗಳೆಲ್ಲಾ ಬಗೆಹರಿಯುವುದು.ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುವುದು. ಕಾಯಿಲೆ ಗುಣಮುಖವಾದಂತೆ ಹೆಚ್ಚು ನಿರಾವಾಗುವಿರಿ.ಬಹಳ ಸಮಯದಿಂದ ಮಾಡಬೇಕೆಂದಿರುವ ಕೆಲಸವನ್ನು ಈ ಸಮಸಯದಲ್ಲಿ ಆರಂಭಿಸಬಹುದು.

Three Planetary Transits Today

ತುಲಾ ರಾಶಿ:

ತುಲಾ ರಾಶಿಯವರ ಬಹುದೊಡ್ಡ ಕನಸು ನನಸಾಗುವ ಕಾಲ ಇದು. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭವಾಗುವುದು.ಹೊಸ ಮನೆಯ ಖರೀದಿ ಅಥವಾ ನಿರ್ಮಾಣ ಮಾಡುವ ಯೋಗವಿದೆ. ಜೊತೆಗೆ ಕಾರು ಖರೀದಿ ಭಾಗ್ಯವೂ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಸನೇಹಿತರೊಂದಿಗೆ ಅಥವಾ ಮನೆಮಂದಿಯೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು.ಸಂಬಂಧಗಳು ಗಟ್ಟಿಯಾಗುವುದು.

Three Planetary Transits Today

ಧನು ರಾಶಿ:

ಧನು ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು.ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು.ವೇತನದಲ್ಲಿಯೂ ಹೆಚ್ಚಳವಾಗುವುದು.ಮಾನಸಿಕ ಒತ್ತಡ ಕಡಿಮೆಯಾಗುವುದು. ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

(ಬರಹ : ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+