ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳು ಭಾಷೆಯ ಪರವಾಗಿ ಜಾರ್ಜ್‌ ವಕೀಲಿ

By Staff
|
Google Oneindia Kannada News

ನವದೆಹಲಿ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ತುಳುವರ ದಶಕಗಳ ಹಿಂದಿನ ಬೇಡಿಕೆಗೆ ಮತ್ತೊಮ್ಮೆ ಜೀವ ಬಂದಿದೆ. ಭಾನುವಾರ ದೆಹಲಿಯಲ್ಲಿ ನಡೆದ ತುಳು ಸಮ್ಮೇಳನದಲ್ಲಿ ತುಳುವರ ಈ ಬೇಡಿಕೆಯ ಬಗ್ಗೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜೊತೆಗೆ ಚರ್ಚಿಸುವುದಾಗಿ ಕೇಂದ್ರರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಭರವಸೆ ನೀಡಿದ್ದಾರೆ.

ತುಳು ಸಮ್ಮೇಳನದ ಆಗ್ರಹಗಳು :

  • ಮಂಗಳೂರು- ಬೆಂಗಳೂರು ಬ್ರಾಡ್‌ಗೇಜ್‌ ನಿರ್ಮಾಣ ಕಾರ್ಯವನ್ನು ಕೂಡಲೇ ಆರಂಭಿಸಬೇಕು
  • ಅಡಿಕೆ, ಕಾಫಿ, ತೆಂಗು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು
  • ಮೀನು ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕು
  • ದಕ್ಷಿಣ ಕನ್ನಡ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು
ಸಮಾವೇಶದಲ್ಲಿ ಮಾಜಿ ಸಚಿವ ಧನಂಜಯ ಕುಮಾರ್‌, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ವಾಮನ ನಂದಾವರ ಭಾಗವಹಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತುಳುವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರು - ಎಂ. ಕೆ. ಧರ್ಮರಾಜ(ಪತ್ರಿಕೋದ್ಯಮ), ಕೆ. ರಾಮ( ಸಮಾಜ ಸೇವೆ), ಕೆ. ಪಿ. ರಾವ್‌ (ತುಳು ಸಂಶೋಧನೆ), ಜಯರಾಮ್‌ ಬನನ್‌(ಕೈಗಾರಿಕೆ), ಆರುವ ಕೊರಗಪ್ಪ ಶೆಟ್ಟಿ (ಯಕ್ಷಗಾನ), ದಾಸಪ್ಪ ರೈ( ಯಕ್ಷಗಾನ), ಸದಾನಂದ ಸುವರ್ಣ(ರಂಗಭೂಮಿ).

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X