ರಾಯಚೂರು ಬಿಎಸ್‌ಪಿ ಮುಖಂಡ ಗುಂಡಿಗೆ ಬಲಿ
ಬೆಂಗಳೂರು : ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ದ ರಾಯಚೂರು ಜಿಲ್ಲೆ ಘಟಕದ ಅಧ್ಯಕ್ಷ ಖಲೀಲ್ ಖಾನ್ ಅವರನ್ನು ಸೋಮವಾರ ದುಷ್ಕರ್ಮಿಗಳು ರಾಯಚೂರಿನಲ್ಲಿ ಗುಂಡಿಟ್ಟು ಕೊಂದಿದ್ದಾರೆ. ಮೃತರಿಗೆ 40 ವರ್ಷ ವಯಸ್ಸಾಗಿತ್ತು .
ಪಕ್ಷದ ಕಚೇರಿಗೆ ಖಲೀಲ್ ಖಾನ್ ಅವರು ಪ್ರವೇಶಿಸುತ್ತಿದ್ದಾಗ ದಿಢೀರ್ ಎದುರಾದ ಇಬ್ಬರು ಅಪರಿಚಿತ ಹಂತಕರು ತೀರಾ ಸಮೀಪದಿಂದ ಗುಂಡು ಹಾರಿಸಿ ಖಲೀಲ್ ಖಾನ್ ಅವರನ್ನು ಕೊಂದರು. ಹತ್ಯೆಯ ಸಂದರ್ಭದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿನ ಮೊದಲನೇ ಮಹಡಿಯಲ್ಲಿನ ಕಚೇರಿಯನ್ನು ತಲುಪಲು ಖಲೀಲ್ ಖಾನ್ ಮೆಟ್ಟಿಲು ಹತ್ತುತ್ತಿದ್ದರು.
ಗುಂಡೇಟಿನಿಂದ ಗಾಯಗೊಂಡ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ದಾಳಿಗೆ ತುತ್ತಾದ ಖಾನ್ ಬದುಕುಳಿಯಲಿಲ್ಲ. ಹತ್ಯೆಯ ಕಾರಣ ತಿಳಿದುಬಂದಿಲ್ಲ . ಆದರೆ, ಹತ್ಯೆ ಸಂಭವಿಸಿದ ಸ್ಥಳದಲ್ಲಿ ಕೆಲವು ಸುಳಿವು ದೊರೆತಿವೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠ ಜೆ.ಅರುಣ್ ಚಕ್ರವರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications