ಭಾರತೀಯ ಕ್ರಿಕೆಟ್‌ನ ಅಣಕು ಶವ ಸಂಸ್ಕಾರ !
ನವದೆಹಲಿ : ಭಾರತೀಯ ಕ್ರಿಕೆಟರುಗಳು ರೂಪದರ್ಶಿಯಾಗಿ ಉಳ್ಳ ಯಾವುದೇ ಸಾಮಾನನ್ನು ನಾವು ಕೊಂಡುಕೊಳ್ಳೋಲ್ಲ ಎಂದು ಇವತ್ತು ಮಾತು ಕೊಡುತ್ತಿದ್ದೇವೆ.
- ದೇಶದ ಉದ್ದಗಲಕ್ಕೂ ಈ ಶಾರ್ಟ್ ಮೆಸೇಜ್ ಸರ್ವೀಸ್ (ಎಸ್‌ಎಂಎಸ್) ಸಂದೇಶ ಅವಿರತವಾಗಿ ಹರಿದಾಡುತ್ತಿದೆ.
ಕಳೆದ ಶನಿವಾರ (ಫೆ.15) ಆಸ್ಟ್ರೇಲಿಯಾ ವಿರುದ್ಧ ತರಗೆಲೆಗಳಂತೆ ಉದುರಿದ ಭಾರತೀಯ ಕ್ರಿಕೆಟ್ಟರುಗಳು ಕ್ರೀಡಾಭಿಮಾನಿಗಳ ಅಭಿಮಾನಕ್ಕೆ ಕೊಡಲಿ ಪೆಟ್ಟು ಕೊಟ್ಟಿರುವುದೀಗ ಸ್ಪಷ್ಟ. ಶನಿವಾರದ ನಂತರದ ಕೆಲವು ಬೆಳವಣಿಗೆಗಳನ್ನು ಗಮನಿಸಿ-
- ಸೌರವ್ ಗಂಗೂಲಿ ಹಾಗೂ ಅವರ ಪಡೆಯ ಕ್ರಿಕೆಟರುಗಳು ಪ್ರಮೋಟ್ ಮಾಡುವ ಉತ್ಪನ್ನಗಳನ್ನು ನಿಷೇಧಿಸುವುದರ ಮೂಲಕ ಅವರಿಗೆ ತಕ್ಕ ಶಾಸ್ತಿ ಮಾಡಿ ಎಂದು ದೆಹಲಿಯಲ್ಲಿ ಒಂದು ಪಡೆ ಅಭಿಯಾನ ಶುರುವಿಟ್ಟುಕೊಂಡಿದೆ.
- ಹಿಂದಿ ಪತ್ರಿಕೆಯಾಂದು ನಡೆಸಿರುವ ಸಮೀಕ್ಷೆಯಲ್ಲಿ ಪ್ರತಿಶತ 80ರಷ್ಟು ಭಾರತೀಯರು ಕ್ರಿಕೆಟ್ಟಿಗರು ಪ್ರಮೊಟ್ ಮಾಡುವ ಉತ್ಪನ್ನಗಳನ್ನು ಖರೀದಿಸದಿರಲು ಸಂಕಲ್ಪ ಮಾಡಿದ್ದಾರೆ.
- ಜನರ ಮೂಡನ್ನು ಗಂಭೀರವಾಗಿ ಪರಿಗಣಿಸಿ ಕ್ರಿಕೆಟ್ಟಿಗರನ್ನು ಮಾಡೆಲಾಗಿ ಉಳ್ಳ ಕೆಲವು ಟೀವಿ ಜಾಹೀರಾತುಗಳನ್ನು ಎಷ್ಟೋ ಕಂಪನಿಗಳು ನಿಷೇಧಿಸಲು ತೀರ್ಮಾನ ಕೈಗೊಂಡಿವೆ.
- ಭಾರತದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕೋಲ್ಕತಾ ಯೂತ್ ಫೆಡರೇಷನ್, ಭಾನುವಾರ (ಫೆ.16) ಭಾರತೀಯ ಕ್ರಿಕೆಟ್‌ನ ಅಣಕು ಅಂತಿಮ ಸಂಸ್ಕಾರ ನಡೆಸಿತು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮೊಹಮ್ಮದ್ ಕೈಫ್ ಮನೆಯ ಗುರಿಯಾಗಿಸಿಕೊಂಡ ಕ್ರುದ್ಧ ಕ್ರೀಡಾಭಿಮಾನಿಗಳು
ಮುಗಿಯಿತು ಭಾರತೀಯ ಕ್ರಿಕೆಟ್ ಹುಚ್ಚು, ಬಾ ಅದನ್ನ ಮಣ್ಣಲಿ ಮುಚ್ಚು
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications