ಮಂತ್ರಾಲಯ ಉತ್ತರಾಧಿಕಾರಿ ಸ್ಥಾನದ ವಿವಾದಕ್ಕೆ ತೆರೆ
ಮಂತ್ರಾಲಯ : ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಕಿರಿಯ ಸ್ವಾಮಿ ಸುವಿದ್ಯೇಂದ್ರ ತೀರ್ಥರಿಗೆ ರಾಮದೇವರ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು ಎಂದು ವಿಧಿಸಿದ್ದ ತಡೆಯಾಜ್ಞೆಯನ್ನು ಆಂಧ್ರಪ್ರದೇಶ ಮುಜರಾಯಿ ಖಾತೆ ಸಚಿವರು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಆಂಧ್ರಪ್ರದೇಶ ಮುಜರಾಯಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳು, ಕಿರಿಯ ಸ್ವಾಮೀಜಿಗಳ ನೇಮಕ ವಿಧಿವತ್ತಾಗಿಲ್ಲ ಎಂಬ ಕಾರಣ ಕೊಟ್ಟು ತಡೆಯಾಜ್ಞೆ ನೀಡಿದ್ದರು. ಆದರೆ ಮುಜರಾಯಿ ಸಚಿವ ಶಿವರಾಮು ರಾಜು ಈ ತಡೆಯಾಜ್ಞೆಯನ್ನು ತೆರವುಗೊಳಿಸಿರುವುದರಿಂದ ಕಿರಿಯ ಸ್ವಾಮೀಜಿಗಳ ಆಯ್ಕೆಯನ್ನು ಒಪ್ಪಿಕೊಂಡಂತಾಗಿದೆ.
ಇನ್ನು ಮುಂದೆ ಉತ್ತರಾಧಿಕಾರಿ ಸ್ವಾಮೀಜಿ ನಿರ್ವಹಿಸುವ ಎಲ್ಲ ಕಾರ್ಯಗಳನ್ನೂ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿಗಳು ನಿರ್ವಹಿಸಬಹುದಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications