ದಿನಕರ್‌ ವಿರುದ್ಧ ನಕ್ಕೀರನ್‌ ಗೋಪಾಲ್‌ ಕೋರ್ಟಿಗೆ

ಬೆಂಗಳೂರು : ಮಾಜಿ ಡಿಜಿಪಿ ಸಿ. ದಿನಕರ್‌ ಅವರು ತಮ್ಮ ‘ವೀರಪ್ಪನ್ಸ್‌ ಪ್ರೆೃಸ್‌ ಕ್ಯಾಚ್‌ : ರಾಜ್‌ಕುಮಾರ್‌’ ಪುಸ್ತಕದಲ್ಲಿ ಮಾಡಿರುವ ಆಪಾದನೆಗಳಿಂದ ವಿಚಲಿತರಾಗಿರುವ ತಮಿಳುನಾಡು ಡಿಐಜಿ ಎಂ. ವಿ. ಮೂರ್ತಿ ಹಾಗೂ ನಕ್ಕೀರನ್‌ ಪತ್ರಿಕೆಯ ಸಂಪಾದಕ ಆರ್‌. ಆರ್‌. ಗೋಪಾಲ್‌, ದಿನಕರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ದಿನಕರ್‌ ತಮ್ಮ ಪುಸ್ತಕದಲ್ಲಿ, ಬುಧಿ ಪಗಡಾ ಗೆಸ್ಟ್‌ ಹೌಸ್‌ನಿಂದ ವೀರಪ್ಪನ್‌ ತಪ್ಪಿಸಿಕೊಂಡು ಹೋಗುವುದಕ್ಕೆ ನಾನೇ ಕಾರಣ ಎಂದು ಆಪಾದಿಸಿದ್ದಾರೆ. ಅಲ್ಲದೆ ಈ ಕುರಿತು ನಡೆಯಬೇಕಿದ್ದ ಸಿಓಡಿ ತನಿಖೆಯ ಸರಕಾರಿ ಫೈಲುಗಳು ಧೂಳು ತಿನ್ನುತ್ತಿವೆ ಎಂದೂ ಹೇಳಿಕೊಂಡಿದ್ದಾರೆ. ಆದರೆ ಸತ್ಯ ಅದಲ್ಲ. ತನಿಖೆಯಲ್ಲಿ ತಾವು ಅಪರಾಧಿಯಲ್ಲ ಎಂಬುದು ಸರಕಾರಕ್ಕೆ ತಿಳಿದುಬಂದಿದ್ದು, 1990ರಲ್ಲಿ ಈ ಕೇಸ್‌ ಫೈಲ್‌ ಅನ್ನು ಮುಚ್ಚಲಾಗಿದೆ. ಅದಾದ ನಂತರವಷ್ಟೇ ನನಗೆ ಐಪಿಎಸ್‌ ರ್ಯಾಂಕ್‌ಗೆ ಬಡ್ತಿ ನೀಡಿದ್ದು ಎಂದು ಮೂರ್ತಿ ಸಮಜಾಯಿಷಿ ನೀಡಿದ್ದಾರೆ.

ಚೆನ್ನೈನಲ್ಲಿ ಇರುವ ಗೋಪಾಲ್‌- ದಿನಕರ್‌ ಅವರು ಪುಸ್ತಕದಲ್ಲಿ ತಮ್ಮ ಮೇಲೆ ಮಾಡಿರುವ ಆರೋಪದಿಂದಾಗಿ ತಮ್ಮ ಹೆಸರಿಗೆ ಮಸಿ ಬಳಿದಂತಾಗಿದೆ ಎಂದಿದ್ದಾರೆ. ಪ್ರಸ್ತುತ ದಿನಕರ್‌ ವಿರುದ್ಧ ಗೋಪಾಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದು, ಡಿಸೆಂಬರ್‌ 24ರಂದು ಈ ಕೇಸಿನ ವಿಚಾರಣೆ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+