ಮಡಿಕೇರಿಯಲ್ಲಿ ಭತ್ತದ ಇಳುವರಿಯಲ್ಲಿ ಕೊರೆ
ಮಡಿಕೇರಿ : ಈ ವರ್ಷ ಮಡಿಕೇರಿಯಲ್ಲಿ ತೀರಾ ಕಡಿಮೆ ಮಾನ್‌ಸೂನ್ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆ ಇಳುವರಿಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ.
ಸಾಮಾನ್ಯವಾಗಿ ಜಿಲ್ಲೆಯ 40 ಸಾವಿರ ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈ ಬಾರಿ ಜೂನ್- ಜುಲೈ ಅವಧಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೇವಲ 35, 248 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ ಎಂದು ಕೃಷಿ ವಿಭಾಗದ ಮುಖ್ಯಸ್ಥ ಪದ್ಮಯ್ಯ ನಾಯಕ್ ಹೇಳಿದ್ದಾರೆ.
ಈಗಾಗಲೇ ಶೇ.25ರಷ್ಟು ಭತ್ತದ ಕೊಯ್ಲು ಕಾರ್ಯ ಮುಗಿದೆ. ಕೊಯ್ಲನ್ನು ಗಮನಿಸಿದಲ್ಲಿ ಇಳುವರಿಯಲ್ಲಿ ತುಂಬಾ ಇಳಿಮುಖವಾಗಿರುವುದು ಕಂಡುಬರುತ್ತದೆ. ಇನ್ನೆರಡು ವಾರದ ಅವಧಿಯಲ್ಲಿ ಬೆಳೆಯ ಸ್ಥಿತಿ ಗತಿಯ ಸ್ಪಷ್ಟ ಚಿತ್ರಣ ದೊರೆಯುತ್ತದೆ ಎಂದು ನಾಯಕ್ ತಿಳಿಸಿದ್ದಾರೆ.
ವಿರಾಜಪೇಟೆಯಲ್ಲಿ 16, 250 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ಆ ಬೆಳೆಗೆ ಪ್ರಾಥಮಿಕ ಹಂತದಲ್ಲಿ ರೋಗ ತಗುಲಿರುವುದರಿಂದ ಅಲ್ಲಿಯೂ ಇಳುವರಿ ಚೆನ್ನಾಗಿ ಬರುವ ನಿರೀಕ್ಷೆಯಿಲ್ಲ ಎಂದು ಪೊನ್ನಂಪೇಟೆಯ ಕೃಷಿ ತಜ್ಞ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications