ಮತ್ತೆ ಹಾರಲಿದೆ ಬೃಂದಾವನದ ಬಣ್ಣದ ಕಾರಂಜಿ
ಮೈಸೂರು : ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಮುಚ್ಚಿದ್ದ ಕನ್ನಂಬಾಡಿ ಕಟ್ಟೆ ಹಾಗೂ ಬೃಂದಾವನದ ಕದಗಳು ಪ್ರವಾಸಿಗರಿಗೆ ಈಗ ತೆರೆದಿವೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರಿಂಕೋರ್ಟ್ ಇನ್ನೂ ತೀರ್ಪು ಕೊಡದಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಪರಿಸ್ಥಿತಿ ಈಗ ತಿಳಿಯಾಗಿರುವುದರಿಂದ ಮಂಕು ಕವಿದಿರುವ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತೆ ಜೀವಕಳೆ ತುಂಬಲು ಸರ್ಕಾರ ನಿರ್ಧರಿಸಿದೆ.
ಬಿಕೋ ಎನ್ನುತ್ತಿದ್ದ ಮೈಸೂರಿನ ಪ್ರವಾಸಿ ತಾಣಗಳು ನಿಧಾನವಾಗಿ ಜನರನ್ನು ಮತ್ತೆ ಸೆಳೆಯುತ್ತಿವೆ. ಬೃಂದಾವನ ಈ ಹಿಂದಿನಂತೆ ನೀರಿಗೆ ಬಣ್ಣದ ಬೆಳಕಿನ ಸಿಂಗಾರದಿಂದ ಕಂಗೊಳಿಸಲಿದೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications