ವೀರಪ್ಪನ್ ಶಿಕಾರಿಗೆ ಕೇಂದ್ರ ಮೀಸಲು ಪಡೆ ತುಕಡಿ
ಮೈಸೂರು : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯ ಒಂದು ತುಕಡಿ ಮಲೆ ಮಹದೇಶ್ವರ ಬೆಟ್ಟದ ಗುಂಟ ಪಾದ ಬೆಳಸಿದ್ದು, ವೀರಪ್ಪನ್ ಶಿಕಾರಿಯ ಪ್ರಕ್ರಿಯೆ ಶುಕ್ರವಾರ ಇನ್ನಷ್ಟು ಚುರುಕಾಗಿದೆ.
ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್) ಗಳು ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ಉಪಕರಣಗಳಿಲ್ಲದೆ ಕಾರ್ಯಾಚರಣೆಗೆ ವೇಗ ದಕ್ಕಿರಲಿಲ್ಲ. ಇದಕ್ಕಾಗಿ ತಾಂತ್ರಿಕ ಬೆಂಬಲ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಕೋರಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸಿಆರ್‌ಪಿಎಫ್‌ನ ದೆಹಲಿಯ ಒಂದು ತುಕಡಿಯನ್ನು ವೀರಪ್ಪನ್ ಶಿಕಾರಿಗಾಗಿ ನಿಯೋಜಿಸಿದೆ. ಗೆರಿಲ್ಲಾ ಕಾರ್ಯಾಚರಣೆಯಲ್ಲಿ ಬಳಸುವ ಶಕ್ತಿಶಾಲಿ ಇನ್ಸಾಸ್ ಶಸ್ತ್ರವನ್ನು ಮೀಸಲು ಪಡೆ ಹೊಂದಿದೆ. ಈ ಪಡೆಯು ತಮಿಳುನಾಡು ಹಾಗೂ ಕರ್ನಾಟಕ ಎಸ್‌ಟಿಎಫ್ ಜೊತೆಯಲ್ಲಿ ಕಾರ್ಯಾಚರಣೆ ನಡೆಸಲಿದೆ.
ಅಡ್ವಾಣಿಗೆ ಖರ್ಗೆ ಮೊರೆ : ವೀರಪ್ಪನ್ ಶಿಕಾರಿಗೆ ಬೇಕಾದ ಸಕಲ ತಾಂತ್ರಿಕ ನೆರವನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರಲ್ಲಿ ಕರ್ನಾಟಕ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಮನವಿ ಮಾಡಿಕೊಂಡರು. ಇದಕ್ಕೆಂದೇ ದೆಹಲಿಗೆ ತೆರಳಿದ ಖರ್ಗೆ, ತಮ್ಮ ಭೇಟಿಯ ಉದ್ದೇಶ ಈಡೇರಿದೆ ಎಂದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications