ಐಲ ದೇವಸ್ಥಾನದ ಉದ್ಧಾರಕ್ಕೆ ಶೃಂಗೇರಿ ಮಠದ ನೆರವು
ಮಂಗಳೂರು: ಕಾಸರಗೋಡಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಐಲ ಪ್ರದೇಶದ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಶೃಂಗೇರಿ ಶಂಕರಾಚಾರ್ಯ ಮಠ ಕೈಗೆತ್ತಿಕೊಳ್ಳಲಿದೆ.
ದೇವಸ್ಥಾನದ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ವಹಿಸಿಕೊಳ್ಳುವುದಾಗಿ ಶ್ರೀ ಭಾರತೀ ತೀರ್ಥ ಸ್ವಾಮಿ ಇತ್ತೀಚೆಗೆ ಐಲ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು.
ಇತ್ತೀಚೆಗೆ ಕಾಸರಗೋಡಿನ ಆವಲ ಮಠದಲ್ಲಿ ಶತ ಚಂಡಿ ಮಹಾಯಾಗ ನಡೆಯಿತು. ಯಾಗದಲ್ಲಿ ಭಾಗವಹಿಸಲು ಆಗಮಿಸಿದ್ದ ಸ್ವಾಮೀಜಿಗೆ ಭವ್ಯ ಸ್ವಾಗತ ಕೋರಲಾಯಿತು. ಭಕ್ತಾದಿಗಳಿಗೆ ಮಾನಸಿಕ ನೆಮ್ಮದಿ ನೀಡುವ ದೇವಸ್ಥಾನಗಳನ್ನು ಉತ್ತಮ ಸ್ಥಿತಿಯಲ್ಲಿ ನೋಡಿಕೊಳ್ಳುವುದು ಭಕ್ತರಾದ ನಮ್ಮ ಕರ್ತವ್ಯ ಎಂದು ಈ ಸಂದರ್ಭದಲ್ಲಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ದುಸ್ಥಿತಿಯ ಅಂಚಿಗೆ ಹೋಗಿರುವ ಐಲ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ವಾಮೀಜಿ ಭೇಟಿ ನೀಡಿದರು. ಮುಂದಿನ ಜೀರ್ಣೋದ್ಧಾರ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ನೆರವನ್ನೂ ಶೃಂಗೇರಿ ಮಠದ ವತಿಯಿಂದ ನೀಡುವುದಾಗಿ ಶ್ರೀಗಳು ಭರವಸೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications