ರಾಜ್ಯ ಸರ್ಕಾರಿ ನೌಕರರಿಗೆ ಶೇ.3 ರಷ್ಟು ತುಟ್ಟಿಭತ್ಯೆ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿಶತ 3 ರಷ್ಟು ತುಟ್ಟಿಭತ್ಯೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
2002 ನೇ ಇಸವಿ ಜುಲೈ 1 ರಿಂದ ಈ ತುಟ್ಟಿಭತ್ಯೆ ಪೂರ್ವಾನ್ವಯವಾಗಲಿದ್ದು , ತುಟ್ಟಿಭತ್ಯೆಯ ಹಣವನ್ನು ಬರುವ ತಿಂಗಳಿಂದ ನಗದು ರೂಪದಲ್ಲಿ ಸರ್ಕಾರ ನೀಡಲಿದೆ. ಬಾಕಿ ಹಣವನ್ನು ರಾಷ್ಟ್ರೀಯ ಉಳಿತಾಯ ಪತ್ರಗಳ ರೂಪದಲ್ಲಿ ಸರ್ಕಾರಿ ನೌಕರರು ಪಡೆಯುವರು.
ಶೇ.3 ರ ತುಟ್ಟಿಭತ್ಯೆ ಏರಿಕೆಯ ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸಿಪ್ಪೇಗೌಡ ಸ್ವಾಗತಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications