ಧರ್ಮಕ್ಷೇತ್ರದಲ್ಲಿ ಸಾಮೂಹಿಕ ಮದುವೆ ಮೇಳ
ಬೆಂಗಳೂರು :ನವಂಬರ್ 24 ರಂದು ಬೆಂಗಳೂರಿಗೆ 41 ಕಿಮೀ ದೂರದ ಧರ್ಮಕ್ಷೇತ್ರದಲ್ಲಿ ಭಗವಾನ್ ಮಹಾವೀರ ಮಾನವತಾ ಕೇಂದ್ರ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ- ಧರ್ಮಕ್ಷೇತ್ರ, ಗುರು ಗಣೇಶ ಮರುಧರ ಕೇಸರಿ ಭವನ, ಸಂಗಬಸವನದೊಡ್ಡಿ , ಇಲ್ಲಿ ಮದುವೆ ಮೇಳ ನಡೆಯಲಿದೆ. ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ವಧು ವರರನ್ನು ಆಶೀರ್ವದಿಸುವರು ಎಂದು ಮಾನವತಾ ಕೇಂದ್ರದ ಮೇನೇಜಿಂಗ್ ಟ್ರಸ್ಟಿ ದೇವರಾಜ್ ಕೊಠಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮದುವೆ ಮೇಳದಲ್ಲಿ ಭಾಗವಹಿಸ ಬಯಸುವ ಆಸಕ್ತರು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು :
ದೇವರಾಜ್ ಕೊಠಾರಿ- 2875392 ಅಥವಾ 98450 32401.
ಡಾ.ಕೆ.ಪಿ.ಹೆಗ್ಡೆ - 7271475, 7271375.
ದ್ವಾರಕಾನಾಥ್- 7274044.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications