ಪುನರ್ಜನ್ಮವಿದ್ರೆ ವಿಯೆಟ್ನಾಂನಲ್ಲಿ ಹುಟ್ತೀನಿ-ಜಾರ್ಜ್‌

ಬೆಂಗಳೂರು: ಪುನರ್ಜನ್ಮ ಎನ್ನುವುದೇನಾದರೂ ಇದ್ದರೆ ನೀವು ಎಲ್ಲಿ ಹುಟ್ಟಲು ಬಯಸುತ್ತೀರಿ? ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರಂತೂ ವಿಯೆಟ್ನಾಂನಲ್ಲಿ ಹುಟ್ಟಲು ಇಚ್ಛಿಸುತ್ತಾರಂತೆ.

ವಿಯೆಟ್ನಾಂ ದೇಶದ ಜನರು ಹಾಗೂ ಅಲ್ಲಿನ ವೇಗದ ಅಭಿವೃದ್ಧಿಯನ್ನು ಕಂಡು ಮರುಳಾದ ಜಾರ್ಜ್‌ ಫರ್ನಾಂಡಿಸ್‌ ಹೀಗೆ ಹೇಳಿದ್ದಾರೆ. ಅವರು ನಗರದಲ್ಲಿ ಮಂಗಳವಾರ (ನ. 12) ನಡೆದ ಕಾಫಿ ಬೆಳೆಗಾರರ ಸಂಘದ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು. ಜಗತ್ತಿನ ಕಾಫಿ ಮಾರುಕಟ್ಟೆಯಲ್ಲಿ ವಿಯೆಟ್ನಾಂ ದೇಶದ ಬಹುದೊಡ್ಡ ಪಾಲಿದೆ... ಆ ಬಗ್ಗೆ ನನ್ನ ತಕರಾರಿಲ್ಲ.. ಆದರೆ ನಾನು ವಿಯೆಟ್ನಾಂ ದೇಶದ ಅಭಿಮಾನಿ . ಮರು ಜನ್ಮವಿದ್ದರೆ ಅಲ್ಲಿ ಹುಟ್ಟಬಯಸುವೆ ಎಂದು ರಕ್ಷಣಾ ಸಚಿವರು ಹೇಳಿದರು.

ವಿಯೆಟ್ನಾಂ ದೇಶದವರು ತುಂಬಾ ಡಿಸಿಪ್ಲಿನ್‌ ಜನರು. ಅವರು ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ. ಆ ನಿರ್ಧಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಅವರು ಸಾವೇ ಬಂದರೂ ಸಿದ್ಧರಾಗಿರುತ್ತಾರೆ ಎಂದು ಸಚಿವರು ವಿಯೆಟ್ನಾಂ ದೇಶದ ಗುಣಗಾನ ಮಾಡಿ, ವಿಯೆಟ್ನಾಂ ದೇಶವನ್ನು ಭೇಟಿ ಮಾಡಿದ ಭಾರತದ ಪ್ರಥಮ ರಕ್ಷಣಾ ಸಚಿವ ತಾವೆಂದು ಹೊಗಳಿಕೊಂಡರು.

ವಿಯೆಟ್ನಾಂನಲ್ಲಿರುವುದು 7.5 ಮಿಲಿಯನ್‌ ಜನರು. ಸುಮಾರು ಮೂರು ಮಿಲಿಯನ್‌ನಷ್ಟು ಜನರು ಅಮೆರಿಕಾ ಮತ್ತು ಚೀನಾದೊಂದಿಗಿನ ಕಾಳಗದಲ್ಲಿ ಮಡಿದರು. ಪರ್‌ಕ್ಯಾಪಿಟಾ ಇನ್‌ಕಮ್‌ ವಿಷಯಕ್ಕೆ ಬಂದರೆ ಆ ದೇಶ ಭಾರತವನ್ನು ಹಿಂದೆ ಹಾಕುತ್ತಿದೆ. ಆ ದೇಶ ಭಾರತೀಯರಿಗೊಂದು ಆದರ್ಶವಾಗಿರಬೇಕು. 100 ವರ್ಷಗಳನ್ನು ಮುಂದಿಟ್ಟುಕೊಂಡು ದೂರಾಲೋಚನೆಯಿಂದ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಆ ದೇಶ ಒಂದು ಉತ್ತಮ ಉದಾಹರಣೆ ಎಂದು ಫರ್ನಾಂಡಿಸ್‌ ಹೇಳಿದರು.

(ಪಿಟಿಐ)

ನೀವೇನಂತೀರಿ ?

ಮುಖಪುಟ / ಕಾವೇರಿ ಕನ್ನಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+