ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವರ್ಷ ಮಾಸ್ಕೋದಲ್ಲಿ ಕೆನರಾ ಬ್ಯಾಂಕ್‌ ಕಚೇರಿ

By Staff
|
Google Oneindia Kannada News

ಬೆಂಗಳೂರು : ಸಾಗರದಾಚೆಗೆ ತನ್ನ ವಹಿವಾಟು ವಿಸ್ತರಿಸುವ ನಿಟ್ಟಿನಲ್ಲಿ ಚೀನಾದ ಮಾಸ್ಕೋದಲ್ಲಿ ಕೆನರಾ ಬ್ಯಾಂಕ್‌ ತನ್ನ ಪ್ರಾತಿನಿಧಿಕ ಕಚೇರಿ ತೆರೆಯಲಿದೆ.

ಜನವರಿ ಅಥವಾ ಫೆಬ್ರವರಿ- 2003 ರ ಹೊತ್ತಿಗೆ ಈ ಕಚೇರಿ ಪ್ರಾರಂಭವಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಮೇನೇಜಿಂಗ್‌ ಡೈರೆಕ್ಟರ್‌ ಆರ್‌.ವಿ.ಶಾಸ್ತ್ರಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಬ್ಯಾಂಕ್‌ನ 11 ಕೋಟಿ ರುಪಾಯಿ ಬೆಲೆಯ ಒಟ್ಟು ಇಕ್ವಿಟಿ ಷೇರುಗಳ (ಪ್ರತಿ ಷೇರಿನ ಮುಖಬೆಲೆ 10 ರುಪಾಯಿ) Initial Public Offering (ಐಪಿಓ) ಯೋಜನೆಗೆ ಚಾಲನೆ ಕೊಟ್ಟ ಸಂದರ್ಭದಲ್ಲಿ ಶಾಸ್ತ್ರಿ ಈ ವಿಷಯ ಹೇಳಿದರು.

ಚೀನಾದಲ್ಲಿ ಕಚೇರಿ ತೆರೆಯುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಯುತ್ತಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ ಸಮೀಕ್ಷೆ ಪೂರೈಸಲಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹಯೋಗದಲ್ಲಿ 20 ದಶಲಕ್ಷ ಅಮೆರಿಕನ್‌ ಡಾಲರ್‌ ಬಂಡವಾಳದ ಮೂಲಕ ಮಾಸ್ಕೋದಲ್ಲಿ ಪ್ರಾತಿನಿಧಿಕ ಕಚೇರಿ ತೆರೆಯುವ ಉದ್ದೇಶವಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಜೊತೆ ಈ ವಿಷಯವನ್ನು ಇನ್ನೂ ಚರ್ಚಿಸಬೇಕಿದೆ ಎಂದರು.

ಸ್ವಯಂ ನಿವೃತ್ತಿ ಯೋಜನೆಯಡಿ ಬ್ಯಾಂಕಿನ 8 ಸಾವಿರ ಸಿಬ್ಬಂದಿ ಈಗಾಗಲೇ ಕೆಲಸ ತ್ಯಜಿಸಿದ್ದಾರೆ. ಸದ್ಯಕ್ಕೆ ಒಟ್ಟು 47 ಸಾವಿರ ಸಿಬ್ಬಂದಿ ಇದ್ದು, ಹೆಚ್ಚಿನ ಸಿಬ್ಬಂದಿಯ ಅಗತ್ಯ ಇಲ್ಲ. ಯೂರೋಪ್‌ ದೇಶಗಳು ಹಾಗೂ ಅಮೆರಿಕದಲ್ಲಿ ಪ್ರಾದೇಶಿಕ ಕಚೇರಿ ತೆರೆಯುವ ಆಶಯವಿದೆ. ಆದರದಕ್ಕೆ ಇನ್ನೂ ಕೆಲವು ವರ್ಷಗಳು ಬೇಕು ಎಂದು ಶಾಸ್ತ್ರಿ ಹೇಳಿದರು.

ನವೆಂಬರ್‌ 18ರಿಂದ ಪ್ರಾರಂಭವಾಗಲಿರುವ ‘ಐಪಿಓ’ ನವೆಂಬರ್‌ 27ರವರೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. 2001- 02ನೇ ವಿತ್ತ ವರ್ಷದಲ್ಲಿ 741 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿರುವ ಕೆನೆರಾ ಬ್ಯಾಂಕ್‌, ಈ ವರ್ಷ ಸಾರ್ವಜನಿಕರತ್ತ ಮುಖ ಮಾಡುತ್ತಿರುವ ನಾಲ್ಕನೇ ಬ್ಯಾಂಕಾಗಿದೆ.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X