ಬೀದರ್ ಸಬ್‌ರಿಜಿಸ್ಟ್ರಾರ್ ಶರ್ಮಾ ಅಮಾನತು
ಬೀದರ್:ಆಸ್ತಿ ಹಣದಲ್ಲಿ ವ್ಯತ್ಯಾಸ ಮಾಡಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಬೀದರ್‌ನ ಸಬ್ ರಿಜಿಸ್ಟ್ರಾರ್ ಮಾಣಿಕ ಶರ್ಮಾ ಎಂಬವರನ್ನು ಅಮಾನತು ಮಾಡಲಾಗಿದೆ.
ನಿಗದಿತ ದರಕ್ಕಿಂತ ಆಸ್ತಿಯ ಮೌಲ್ಯವನ್ನು ಕಡಿಮೆಗೊಳಿಸಿ ಸರಕಾರವನ್ನು ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಶರ್ಮಾ ಅವರನ್ನಲ್ಲದೆ ಅವರ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಷಫೀ ಅವರನ್ನು ಅಮಾನತುಗೊಳಿಸಲಾಗಿದೆ. ಆಸ್ತಿ ನೋಂದಣಿಯ ಸಂದರ್ಭದಲ್ಲಿ ಸರಕಾರ ನಿಗದಿ ಮಾಡಿದ ಶುಲ್ಕದ ಬದಲಿಗೆ ಸಂಬಂಧಿಸಿದವರಿಂದ ಲಂಚ ಪಡೆದು ಕಡಿಮೆ ಹಣಕ್ಕೆ ನೋಂದಣಿ ಮಾಡಿಸುತ್ತಿದ್ದುದರಿಂದ ಖಜಾನೆಗೆ ಸೇರಬೇಕಾದ ಶುಲ್ಕ ಅಧಿಕಾರಿಗಳ ಜೇಬು ಸೇರಲು ಕಾರಣವಾಗಿತ್ತು.
ಈ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಶರ್ಮಾ ಅವರನ್ನು ಅಮಾನತಿನಲ್ಲಿರಿಸಲು ನಿರ್ಧರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications