ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಮೇಯರ್‌ ಆಗಿ ಮರಾಠಿ ಭಾಷಿಕರಾದ ನೀಲಿಮಾ ಚವಾಣ್‌

By Staff
|
Google Oneindia Kannada News

ಬೆಳಗಾವಿ: ಜಿಲ್ಲೆಯಾದ್ಯಂತ ಕುತೂಹಲ ಹುಟ್ಟಿಸಿದ್ದ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ನೀಲಿಮಾ ಚವಾಣ್‌ ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದು, ಸುನೀಲ್‌ ಕುಡಚಿಯವರು ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಸರ್ವಭಾಷಿಕ ಸಮ ವಿಚಾರ ವೇದಿಕೆ ಹಾಗೂ ಕನ್ನಡ -ಉರ್ದು ಭಾಷಿಕ ಎಂಬ ಬೇಧ ಉಂಟಾಗಿತ್ತು. ನೀಲಿಮಾ ಚವಾಣ್‌ ಮರಾಠಿ ಭಾಷಿಕರಾಗಿದ್ದು, ಶಿವಸೇನೆ ಮತ್ತು ಎಂಈಎಸ್‌ ಬೆಂಬಲಿತ ಮರಾಠಿ ಗುಂಪಿನ ಅಭ್ಯರ್ಥಿ ಶಿವಾಜಿ ಸುಂಠಕರ್‌ ಅವರನ್ನು ಎರಡು ಮತಗಳ ಅಂತರದಿಂದ ಸೋಲಿಸಿದರು.

ಸರ್ವ ಭಾಷಿಕ ಸಮವಿಚಾರ ವೇದಿಕೆಯ ಕನ್ನಡ- ಉರ್ದು ಭಾಷೆಯ ಸುನೀಲ್‌ ಕುಡಚಿಯವರೂ ಕೂಡ ಎರಡು ಮತಗಳ ಅಂತರದಿಂದ ಶಿವಸೇನೆ ಮತ್ತು ಎಂಈಎಸ್‌ ಬೆಂಬಲಿತ ಮರಾಠಿ ಭಾಷಿಕ ಗುಂಪಿನ ಅಪ್ಪಾ ಸಾಹೇಬ ಪಾಟೀಲ್‌ ಅವರನ್ನು ಸೋಲಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X