‘ಮಾಧ್ಯಮಗಳ ಮಂತ್ರಿಮಂಡಲ ಪುನರ್ರಚನೆ ಭವಿಷ್ಯ’-ಕೆರಳಿದ ಕೃಷ್ಣ!
ಮಂಡ್ಯ: ರಾಜ್ಯ ಸಚಿವ ಸಂಪುಟ ಪುನರ್ರಚನೆ ಶುಕ್ರವಾರ (ಜೂ.21) ನಡೆಯಲಿದೆ ಎನ್ನುವ ಮಾಧ್ಯಮಗಳ ಕಪೋಲ ಕಲ್ಪಿತ ವರದಿಗಳನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತೀವ್ರವಾಗಿ ಟೀಕಿಸಿದ್ದಾರೆ.
ತವರು ಜಿಲ್ಲೆ ಮಂಡ್ಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಸತಿ ಯೋಜನೆಯಾಂದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಕೃಷ್ಣ , ಇಂಥ ಕಲ್ಪಿತ ವರದಿಗಳನ್ನು ಸುಳ್ಳು ಮಾಡಲೆಂದೇ ತಾವು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಅತ್ಯಂತ ಸಹಜವಾದ ಪ್ರಕ್ರಿಯೆ ಎಂದು ಬಣ್ಣಿಸಿದ ಅವರು , ಸಂಪುಟ ಪುನರ್ರಚನೆ ಮುಹೂರ್ತ ಹತ್ತಿರದಲ್ಲಿಲ್ಲ ಎನ್ನುವ ಇಂಗಿತ ವ್ಯಕ್ತಪಡಿಸಿದರು.
ಶುಕ್ರವಾರ ಮಂತ್ರಿ ಮಂಡಲ ಪುನರ್ರಚನೆ ನಡೆಯುತ್ತದೆ ಎನ್ನುವ ವ್ಯಾಪಕ ವದಂತಿಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಕೃಷ್ಣ - ಸಂಪುಟ ಪುನರ್ರಚನೆಯಂಥ ಪ್ರಮುಖ ಘಟನೆ ನಡೆಯುತ್ತಿದ್ದಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ . ಆದರೆ, ಹಬ್ಬಿರುವ ಸುದ್ದಿಗಳೆಲ್ಲ ಸುಳ್ಳು ಎನ್ನುವುದನ್ನು ಖಚಿತಪಡಿಸುವ ಉದ್ದೇಶದಿಂದಾಗಿಯೇ ತಾವು ಮಂಡ್ಯಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications