ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋಮಾಲಿನ್ಯ ನಿವಾರಣೆಗೆ ಇ-ಮೇಲ್‌ ವೇದಿಕೆ : ಟೆಕ್ಸಾಸ್‌ ಸಮೀಕ್ಷೆ

By Staff
|
Google Oneindia Kannada News

ಟೆಕ್ಸಾಸ್‌ : ಇ- ಮೇಲ್‌ ಕಳುಹಿಸುವುದು ಆರೋಗ್ಯಕರ. ಸುಪ್ತ ಭಾವನೆಗಳ ಅಭಿವ್ಯಕ್ತಿಗೆ ಅದುವೇ ವೇದಿಕೆ. ತಳಮಳ ಕಳೆದುಕೊಂಡ ಮನಸ್ಸು ನಿರುಮ್ಮಳ. ಇ- ಮೇಲ್‌ ಬಳಕೆ ಮನಸ್ಸಿನ ಆರೋಗ್ಯಕ್ಕೆ ಬೋನಸ್ಸು ಎನ್ನುತ್ತಿದೆ ಒಂದು ಸಮೀಕ್ಷೆ.

ಟೆಕ್ಸಾಸ್‌ ವಿಸ್ವವಿದ್ಯಾಲಯದ ಮನಃಶಾಸ್ತ್ರ ಇಲಾಖೆ ಈ ಸಮೀಕ್ಷೆ ನಡೆಸಿದೆ. ಸೆಪ್ಟೆಂಬರ್‌ 11ರ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ಆತಂಕದ ಕ್ಷಣಗಳನ್ನು ತಮ್ಮವರೊಂದಿಗೆ ಇ- ಮೇಲ್‌ ಮೂಲಕ ಹಂಚಿಕೊಂಡ ವಿದ್ಯಾರ್ಥಿಗಳ ಮನಸ್ಥಿತಿ, ಇ- ಮೇಲ್‌ ಕಳುಹಿಸದ ವಿದ್ಯಾರ್ಥಿಗಳ ಮನಸ್ಥಿತಿಗಿಂತ ಬಲವಾಗಿರುತ್ತದೆ. ಭಯ, ಕಷ್ಟ, ಅಳುಕುಗಳನ್ನು ಹತ್ತಿರದವರೊಡನೆ ಹಂಚಿಕೊಳ್ಳಲು ಇ- ಮೇಲ್‌ ತುರ್ತು ವೇದಿಕೆಯಾಗಿದೆ. ಕೆಲಸ ಮಾಡುವ ಸ್ಥಳದಿಂದಲೇ ಮನದ ಇಂಗಿತ ಹೊರಹಾಕುವುದು ಸಾಧ್ಯವಾಗಿದೆ ಎಂಬುದು ಸಮೀಕ್ಷೆಯ ವರದಿಯ ಸಾರ.

ಇ- ಮೇಲ್‌ ಒಂದು ಗುಪ್ತ ಗಾಮಿನಿಯಾಗಿದೆ. ಇಲ್ಲಿ ಎಲ್ಲವೂ ಮುಕ್ತ, ಎಲ್ಲವೂ ಗೌಪ್ಯ. ಅದು ಹಾಗಿರುವುದಿಲ್ಲ ಎಂಬುದು ವಾಸ್ತವವಾಗಿದ್ದರೂ ಕೂಡ ಬರೆಯುವವ ಹಾಗೂ ಅದನ್ನು ಓದುವವ ಇಬ್ಬರಿಗೆ ಗೊತ್ತಾಗುತ್ತದೆಂಬ ಬಲವಾದ ನಂಬಿಕೆ. ತೀರಾ ವೈಯಕ್ತಿಕ ಎಂಬ ವಿಷಯಗಳನ್ನೂ ಎಗ್ಗಿಲ್ಲದೆ ಬಿಚ್ಚಿಡುವುದು ಇಲ್ಲಿ ಸಾಧ್ಯವಾಗುತ್ತಿದೆ. ಅಂಚೆ ಪತ್ರದ ಮೂಲಕ ಇದು ಈ ಮಟ್ಟದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಉದಾಹರಣೆಗೆ- ಲೈಂಗಿಕ ವಿಚಾರಗಳು ಇ- ಮೇಲ್‌ ಮೂಲಕ ಎಗ್ಗಿಲ್ಲದೆ ಹರಿದಾಡುತ್ತವೆ. ಕಾರಣ- ಮನಸ್ಸಿಗೆ ಇ- ಮೇಲ್‌ ಮುಕ್ತ ವೇದಿಕೆ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಇದು ಭಾರೀ ಒಳಿತು ಎನ್ನುತ್ತಾರೆ ಟೆಕ್ಸಾಸ್‌ ವಿಶ್ವವಿದ್ಯಾಲಯದ ವಿಜ್ಞಾನಿ ಎರಿನ್‌ ಬ್ರೌನ್‌. ನೀವೇನಂತೀರಿ?

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X