ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2001- 02ರಲ್ಲಿ ವಿಪ್ರೋಗೆ 8.9 ಶತಕೋಟಿ ರುಪಾಯಿ ಲಾಭ

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ 2002ಕ್ಕೆ ಪೂರೈಸಿದ ವಿತ್ತ ವರ್ಷದಲ್ಲಿ ಐಟಿ ಕ್ಷೇತ್ರದ ಮುಂಚೂಣಿ ಕಂಪನಿ ವಿಪ್ರೋ 8.9 ಶತಕೋಟಿ ರುಪಾಯಿ ದಾಖಲೆಯ ಲಾಭ ಗಳಿಸಿದೆ.

ಉದ್ದಿಮೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದ ಸಂದರ್ಭದಲ್ಲಿಯೂ ಕಂಪನಿಯ ಲಾಭ ಪ್ರತಿಶತ 32ರಷ್ಟು ಹೆಚ್ಚಾಗಿರುವುದು ನಮ್ಮ ಕೆಲಸಕ್ಕೆ ಸಂದಿರುವ ಸತ್ಫಲ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಶುಕ್ರವಾರ ವಿತ್ತ ವರದಿಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಹೇಳಿದರು.

ಗುಣಮಟ್ಟ ಹಾಗೂ ಉತ್ಪನ್ನಗಳ ಅಭಿವೃದ್ಧಿ ನಮ್ಮ ಯಶಸ್ಸಿನ ಮಂತ್ರ. ಆ ಕಾರಣಕ್ಕೇ ಗ್ರಾಹಕರಿಗೆ ನಮ್ಮ ಕಂಪನಿ ಪ್ರಮುಖ ಆಕರ್ಷಣೆಯಾಗಿದೆ. 2001- 02 ವಿತ್ತ ವರ್ಷದಲ್ಲಿ ವಿಪ್ರೋ ಟೆಕ್ನಾಲಜೀಸ್‌ನ ನಿವ್ವಳ ಆದಾಯ 35 ಶತಕೋಟಿ ರುಪಾಯಿ. ಹಿಂದಿನ ವಿತ್ತ ವರ್ಷಕ್ಕಿಂತ ಆದಾಯ ಶೇ.12ರಷ್ಟು ಹೆಚ್ಚಾಗಿದೆ ಎಂದು ಪ್ರೇಂಜಿ ತಿಳಿಸಿದರು.

ಪ್ರತಿ ಷೇರಿಗೆ 1 ರುಪಾಯಿ ಡಿವಿಡೆಂಟ್‌ ನೀಡುವಂತೆ ಕಂಪನಿಯ ನಿರ್ದೇಶಕರು ಶಿಫಾರಸ್ಸು ಮಾಡಿದ್ದಾರೆ. ಜುಲೈ 2002ರಂದು ಮಂಡಳಿಯ ಸಭೆ ನಡೆಯಲಿದ್ದು, ಅಲ್ಲಿ ಷೇರುದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. 2001- 02 ವಿತ್ತ ವರ್ಷದಲ್ಲಿ ಕಂಪನಿಗೆ 107 ಹೆಚ್ಚು ಗ್ರಾಹಕರು ಸಿಕ್ಕಿದ್ದು, ಇದರಿಂದ ಆದಾಯದಲ್ಲಿ ಪ್ರತಿಶತ 20ರಷ್ಟು ಹೆಚ್ಚಳವಾಗಿದೆ ಎಂದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X