ಪುಟಾಣಿಗಳೇ, ಸದ್ಯದಲ್ಲೇ ಮಿಕ್ಕಿ ಮೌಸ್‌ಗಳು ಕನ್ನಡದಲ್ಲಿ ಮಾತಾಡುತ್ತವೆ!
ಬೆಂಗಳೂರು: ಪುಟಾಣಿಗಳಿಗೊಂದು ಶುಭ ಸುದ್ದಿ ! ಮಿಕ್ಕಿ ಮೌಸ್ ಕನ್ನಡದಲ್ಲಿ ಮಾತಾಡಲಿದೆ. ವಾಲ್ಟ್ ಡಿಸ್ನಿ ಕಂಪೆನಿಯು ಸದ್ಯದಲ್ಲಿಯೇ ಡಿಸ್ನಿ ಕಾರ್ಟೂನ್ ಧಾರಾವಾಹಿಯನ್ನು ಕನ್ನಡದ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಿದೆ.
ಡಿಡಿ ಮೆಟ್ರೋ ಮತ್ತು ಸೋನಿ ಟಿವಿಯಲ್ಲಿ ಹಿಂದಿ ಡಿಸ್ನಿ ಸೀರಿಯಲ್‌ಗಳು ಈಗಾಗಲೇ ಪ್ರಸಾರವಾಗುತ್ತಿವೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಕಾರ್ಟೂನ್ ಸೀರಿಯಲ್‌ಗಳನ್ನು ಪ್ರಸಾರ ಮಾಡುವ ಯೋಚನೆ ಡಿಸ್ನಿ ಕಂಪೆನಿಗೆ ಹೊಳೆದಿದ್ದು, ಇನ್ನೆರಡು ತಿಂಗಳೊಳಗೆ ಉದಯ ಟೀವಿಯಲ್ಲಿ ಬರುವ ಡಿಸ್ನಿ ಸೀರಿಯಲ್‌ನಲ್ಲಿ ಮಿಕ್ಕಿಮೌಸ್‌ಗಳು ಕನ್ನಡ ಮಾತಾಡುತ್ತವೆ.
ದಕ್ಷಿಣ ಭಾರತದಲ್ಲಿ ಹಿಂದಿ ಭಾಷಾ ಅನಿಮೇಷನ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಡಿಸ್ನಿ ಸೀರಿಯಲ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಬ್ಯೂನಾ ವಿಸ್ಟಾ ಟೀವಿಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರತಿಕ್ ಬಸು ಹೇಳುತ್ತಾರೆ.
ಪ್ರಾದೇಶಿಕ ಭಾಷಾ ಚಾನೆಲ್‌ಗಳ ಮಕ್ಕಳ ಕಾರ್ಯಕ್ರಮ ಕ್ಷೇತ್ರದಲ್ಲಿ ಶೇ 66ರಷ್ಟು ಮಾರುಕಟ್ಟೆಯನ್ನು ಡಿಸ್ನಿ ಹೊಂದಿದೆ. ಈಟೀವಿ(ಬಾಂಗ್ಲಾ), ಈಟೀವಿ (ಮರಾಠಿ) ಮತ್ತು ಉದಯ ಟೀವಿ(ಕನ್ನಡ)ಯಾಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ವಾಲ್ಟ್ ಡಿಸ್ನಿ ಶೇ 90ರಷ್ಟು ಮಾರುಕಟ್ಟೆ ವಿಸ್ತಾರವನ್ನು ಪಡೆದುಕೊಳ್ಳಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications