ಎಎಲ್‌ಎಚ್ : ಭಾರತದಿಂದ ರಫ್ತಾಗಲಿರುವ ಮೊದಲ ಹಗುರ ಹೆಲಿಕಾಪ್ಟರ್
ಬೆಂಗಳೂರು : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿ ಪಡಿಸಿರುವ ಹಗುರ ಹೆಲಿಕಾಪ್ಟರ್ (ಎಎಲ್‌ಎಚ್) ಸದ್ಯದಲ್ಲೇ ಗಗನ ಮುಟ್ಟಲಿದ್ದು, ವಿದೇಶಗಳಿಗೆ ರಫ್ತಾಗಲಿರುವ ಭಾರತ ತಯಾರಿಸಿರುವ ಪ್ರಥಮ ಸಂಪೂರ್ಣ ವೈಮಾನಿಕ ಉತ್ಪನ್ನ ಇದಾಗಿದೆ.
ಎಎಲ್‌ಎಚ್ ಅನ್ನು ಕೋಸ್ಟಲ್ ಗಾರ್ಡ್(ಕರಾ-ವ-ಳಿ ಪಡೆ)ಗೆ ಹಸ್ತಾಂತರಿಸಿದ ಸಂದರ್ಭದಲ್ಲಿ ಎಚ್‌ಎಎಲ್ ಅಧ್ಯಕ್ಷ ಎನ್.ಆರ್.ಮೊಹಾಂತಿ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 535 ಕೋಟಿ ರುಪಾಯಿ ವೆಚ್ಚದ ಎಎಲ್‌ಎಚ್ ಯೋಜನೆ ಒಂಬತ್ತೂವರೆ ವರ್ಷಗಳ ತಪಸ್ಸು. ಟರ್ಬೋ ಮೆಕಾದ T M 333-2 B ಟರ್ಬೋ ಶಾರ್ಪ್ ಎಂಜಿನ್ ಹೊಂದಿರುವ ಪ್ರತಿ ಹಗುರ ಹೆಲಿಕಾಪ್ಟರ್ ನಿರ್ಮಾಣ ವೆಚ್ಚ 24 ಕೋಟಿ ರುಪಾಯಿ. ಇದನ್ನು ರಫ್ತು ಮಾಡುವ ಕ್ರಮಗಳಿಗೆ ಈಗ ಚಾಲನೆ. ಮಾರ್ಚ್ 20ರಂದು ಭಾರತೀಯ ಸೇನೆ ಈ ಹೆಲಿಕಾಪ್ಟರನ್ನು ಅಧಿಕೃತವಾಗಿ ಗಗನಕ್ಕೆ ಹಾರಿ ಬಿಡಲಿದೆ ಎಂದರು.
ಬೋಯಿಂಗ್ ಮತ್ತಿತರ ಕಂಪನಿಗಳಿಗೆ ಭಾರತ ವೈಮಾನಿಕ ಬಿಡಿ ಭಾಗಗಳನ್ನು ಮಾತ್ರ ಈವರೆಗೆ ರಫ್ತು ಮಾಡುತ್ತಿದೆ. ಇದೇ ಪ್ರಥಮ ಬಾರಿಗೆ ಪೂರ್ಣ ಹೆಲಿಕಾಪ್ಟರನ್ನು ರಫ್ತು ಮಾಡಲಿದೆ. ಇದು ಸಂಸ್ಥೆಯ ಯಶಸ್ಸಿನ ಕಿರೀಟಕ್ಕೆ ಸಲ್ಲಲಿರುವ ದೊಡ್ಡ ಗರಿ ಎಂದು ಮೊಹಾಂತಿ ಹೆಮ್ಮೆಯಿಂದ ಹೇಳಿದರು.
ಈ ಹೆಲಿಕಾಪ್ಟರ್ ಮೊದಲು ಬೆಂಗಳೂರಿನಲ್ಲೇ ಹಾರಲಿದೆ. ಎಚ್‌ಎಎಲ್‌ನ ಪರಿವೀಕ್ಷಣೆಯ ನಂತರ ಗೋವಾ ವಲಯಕ್ಕೆ ತಲುಪಲಿದೆ. ಪ್ರಸಕ್ತ ಯೋಜನಾ ಅವಧಿಯಲ್ಲೇ ಕೋಸ್ಟಲ್ ಗಾರ್ಡ್ ಇನ್ನೊಂದು ಎಎಲ್‌ಎಚ್‌ಅನ್ನು ಪಡೆಯಲಿದೆ. ಮುಂದಿನ ಯೋಜನಾ ಅವಧಿಯಲ್ಲಿ ಇಂಥಾ ನಾಲ್ಕು ವಿಮಾನಗಳನ್ನು ಪಡೆಯುವ ಉದ್ದೇಶವಿದೆ. ಇದರಿಂದ ಕರಾವಳಿ ವಲಯದ ಭದ್ರತೆ ಭಾರೀ ಬಿಗಿಯಾಗಲಿದೆ ಎಂದು ಕೋಸ್ಟ್ ಗಾರ್ಡ್‌ನ ಪ್ರಧಾನ ನಿರ್ದೇಶಕ, ಉಪ ಅಡ್ಮಿರಲ್ ವಿ.ಪಿ.ಬನ್ಸಾಲ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications