ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಿಮ್ಮ ಹಿತಾಸಕ್ತಿ ಹಿಂದೂಗಳ ಕೈಲಿದೆ’ ಮುಸ್ಲಿಮರಿಗೆ ಆರ್‌ಎಸ್‌ಎಸ್‌ ಎಚ್ಚರಿಕೆ

By Staff
|
Google Oneindia Kannada News

ಬೆಂಗಳೂರು : ಭಾನುವಾರದ ಮಹತ್ವದ ಬೆಳವಣಿಗೆಯಲ್ಲಿ ಹಿಂದೂಗಳ ಸದಭಿಪ್ರಾಯ ಪಡೆಯಲು ಪ್ರಯತ್ನಿಸುವಂತೆ ಭಾರತದ ಮುಸ್ಲಿಮರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಿವಿಮಾತು ಹೇಳಿದ್ದು , ಇಲ್ಲದಿದ್ದಲ್ಲಿ ಭಾರತದ ಮುಸ್ಲಿಮರ ಹಿತರಕ್ಷಣೆಗೆ ಯಾವುದೇ ಗ್ಯಾರಂಟಿಯಿಲ್ಲ ಎಂದು ಸಂಘ ಎಚ್ಚರಿಸಿದೆ.

ಬಹುಸಂಖ್ಯಾತರಾದ ಹಿಂದೂಗಳ ಒಲುಮೆ ಪಡೆಯುವುದು ತಮ್ಮ ಹಿತಾಸಕ್ತಿಗೆ ಅನುಕೂಲಕರ ಎನ್ನುವುದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎನ್ನುವ ನಿರ್ಣಯವನ್ನು ಬೆಂಗಳೂರು ಹೊರ ವಲಯದ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್‌) ದಲ್ಲಿ ಆರ್‌ಎಸ್‌ಎಸ್‌ ಉನ್ನತ ಸಮಿತಿ ಭಾನುವಾರ ಕೈಗೊಂಡಿದೆ.

ಮುಸ್ಲಿಮರು ಈ ನೆಲದ ಕಾನೂನನ್ನು ಒಪ್ಪಬೇಕು ಹಾಗೂ ಹಿಂದೂಗಳನ್ನು ಪ್ರಚೋದಿಸುವುದನ್ನು ಬಿಟ್ಟು , ಅವರ ಭಾವನೆಗಳನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಸಂಘ ಪರಿವಾರದ ಪ್ರಮುಖ ಹಾಗೂ ಆರ್‌ಎಸ್‌ಎಸ್‌ ವಕ್ತಾರ ಮದನ್‌ ದಾಸ್‌ ಎಬಿಪಿಎಸ್‌ ನಿರ್ಣಯದ ಕುರಿತು ಸುದ್ದಿಗಾರರಿಗೆ ತಿಳಿಸಿದರು.

ಹಿಂದೂಗಳದು ಗದ್ದಲ ರಹಿತ ಹಾಗೂ ಶಾಂತಿಯುತ ಸಮಾಜ
ಭಾರತದಲ್ಲಿ ಶಾಂತಿ ಸಾಮರಸ್ಯ ಹಿಂದೂಗಳ ಅಪೇಕ್ಷೆ ಎಂದು ಬಣ್ಣಿಸಿದ ದಾಸ್‌, ಕೆಲವು ಮುಸ್ಲಿಮರು ಹಿಂದೂಗಳನ್ನು ನಿಂದಿಸುವ ಮೂಲಕವೇ ಭಾರತದಲ್ಲಿ ಸಹ್ಯ ಜೀವನ ನಡೆಸಬಹುದೆಂದು ಭಾವಿಸಿದ್ದಾರೆ ಎಂದು ಟೀಕಿಸಿದರು.

ಗೋಧ್ರಾ ನರಮೇಧ ಭಯಾನಕ ಹಾಗೂ ಪೈಶಾಚಿಕ. ಇದಕ್ಕೆ ಪ್ರತಿಯಾಗಿ ನಡೆದ ಹಿಂಸಾಚಾರದಲ್ಲಿ ಹಲವರು ಜೀವ ಕಳೆದುಕೊಂಡುದು ವಿಷಾದಕರ. ಆದರೆ, ಕೆಲವು ರಾಜಕೀಯ ಪಕ್ಷಗಳು ಓಟಿನ ರಾಜಕಾರಣಕ್ಕಾಗಿ ಈ ಘಟನೆಯನ್ನು ಅಯೋಧ್ಯೆ ವಿವಾದಕ್ಕೆ ಗಂಟು ಹಾಕಲು ಪ್ರಯತ್ನಿಸುತ್ತಾರೆ. ಇದು ಹಿಂದೂಗಳ ಮನಸ್ಸನ್ನು ಆಳವಾಗಿ ಘಾಸಿಗೊಳಿಸಿದೆ ಎಂದರು.

ಜಿಹಾದ್‌ ಭಯೋತ್ಪಾದಕತೆಯ ಬಗೆಗೆ ಕೆಲವು ಮುಸ್ಲಿಂ ನಾಯಕರು ಅರಿವು ಹೊಂದಿದ್ದರೂ, ಮುಲ್ಲಾಗಳು ಹಾಗೂ ಮೌಲ್ವಿಗಳ ಮೇಲೆ ಅವರು ಪ್ರಭಾವ ಬೀರಲಾಗುತ್ತಿಲ್ಲ . ಹಿಂದೂ ಸಮುದಾಯ ವಿರೋಧಿ ಚಟುವಟಿಕೆ ಮುಸ್ಲಿಮರಿಗೆ ಗೌರವ ತರುವಂಥದಲ್ಲ ಎಂದು ಎಬಿಪಿಎಸ್‌ ನಿರ್ಣಯ ಅಭಿಪ್ರಾಯ ಪಟ್ಟಿರುವುದಾಗಿ ದಾಸ್‌ ಹೇಳಿದರು.

ಅಯೋಧ್ಯೆ- ದಿನದಿಂದ ದಿನಕ್ಕೆ ವಿಷಮಿಸುತ್ತಿರುವ ಪರಿಸ್ಥಿತಿ
ಅಯೋಧ್ಯೆ ಪ್ರಕರಣದ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಮಂದಿರ- ಮಸೀದಿ ಇತ್ಯರ್ಥ ಆಗುವವರೆಗೂ ದೇಶದಲ್ಲಿ ಶಾಶ್ವತ ಶಾಂತಿ ಸಾಧ್ಯವಿಲ್ಲ . ಸಮಸ್ಯೆಯನ್ನು ಬೇಗ ಪರಿಹರಿಸುವ ಮೂಲಕ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡಬೇಕೆಂದು ಆರ್‌ಎಸ್‌ಎಸ್‌ ಉನ್ನತ ನಾಯಕರ ಸಭೆ ಅಭಿಪ್ರಾಯಪಟ್ಟಿದೆ. ಕಾಶಿ ಹಾಗೂ ಮಥುರಾಗಳಲ್ಲಿನ ವಿವಾದಾಸ್ಪದ ಪ್ರದೇಶಗಳನ್ನು ಹಿಂದೂಗಳಿಗೆ ಒಪ್ಪಿಸುವಂತೆಯೂ ಮುಸ್ಲಿಮರನ್ನು ಒತ್ತಾಯಿಸಲು ಎಬಿಪಿಎಸ್‌ ನಿರ್ಣಯ ಕೈಗೊಂಡಿತು ಎಂದು ಮದನ್‌ ದಾಸ್‌ ತಿಳಿಸಿದರು.

(ಪಿಟಿಐ)

Do you agree with Madan Das?

ವಾರ್ತಾ ಸಂಚಯ
ಆರ್‌ಎಸ್‌ಎಸ್‌ನಿಂದ ಬಿಜೆಪಿ ದೂರ, ಬಿಜೆಪಿಯಿಂದ ಆರ್‌ಎಸ್‌ಎಸ್‌ ದೂರ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X