ಚೆನ್ನೇನಹಳ್ಳಿಯಲ್ಲಿ ಮಾ.15ರಿಂದ ಆರೆಸ್ಸಸ್‌ನ ರಾಷ್ಟ್ರೀಯ ಪ್ರತಿನಿಧಿ ಸಭೆ
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಮಹಾಸಭೆಯು ಚೆನ್ನೇನ ಹಳ್ಳಿಯಲ್ಲಿ ಮಾರ್ಚ್ 15ರಂದು ಆರಂಭವಾಗಲಿದೆ.
ಮೂರು ದಿನಗಳ ಕಾಲ ನಡೆಯುವ ಈ ಪ್ರತಿನಿಧಿ ಸಮಾವೇಶದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು ಗುಜರಾತ್ ಕೋಮುಗಲಭೆ, ಅಯೋಧ್ಯಾ ವಿವಾದ ಹಾಗೂ ರಾಮಜನ್ಮ ಭೂಮಿ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವುಗಳ ಬಗ್ಗೆ ಚರ್ಚೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆಯಿದ್ದು, ಆರ್‌ಎಸ್‌ಎಸ್‌ನ ಸರಸಂಘ ಚಾಲಕ ಕು.ಸೀ. ಸುದರ್ಶನ್ ಮತ್ತು ಹಿರಿಯ ಮುಖಂಡ ಹೊ. ವೆ.ಶೇಷಾದ್ರಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಆರ್‌ಎಸ್‌ಎಸ್ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವರು ಎಂದು ಆರ್‌ಎಸ್‌ಎಸ್‌ನ ಮುಖಂಡ ಕೃ. ನರಹರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications