ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂಡಬಿದ್ರೆಗೆ ಏರ್‌ಟೆಲ್ ಮೊಬೈಲ್ ಫೋನ್ ಸೇವಾ ವಿಸ್ತರಣೆ
ಮೂಡಬಿದ್ರೆ : ಮಂಗಳೂರಿನ ಏರ್‌ಟೆಲ್ ಮೊಬೈಲ್ ಫೋನ್ ಸರ್ವಿಸ್ ಸೆಂಟರ್ ಮೂಡಬಿದ್ರೆಗೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದೆ.
ಮೂಡಬಿದ್ರೆಯ ಏರ್‌ಟೆಲ್ ಮೊಬೈಲ್ ಸೆಂಟರ್‌ನ್ನು ಶಾಸಕ ಕೆ. ಅಭಯಚಂದ್ರ ಶನಿವಾರ ಉದ್ಘಾಟಿಸಿದರು. ಮಂಗಳೂರಿನಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಮೂಡಬಿದ್ರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮೊಬೈಲ್ ಫೋನ್ ವ್ಯವಸ್ಥೆ ಇವತ್ತಿನ ಅಗತ್ಯವಾಗಿದೆ ಎಂದು ಅಭಯ ಚಂದ್ರ ಅಭಿಪ್ರಾಯಪಟ್ಟರು.
ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಮೂಡಬಿದ್ರೆಗೆ ಫೋನ್ ವ್ಯವಸ್ಥೆ ಒಂದು ಮೂಲಭೂತ ಸೌಕರ್ಯವೆನಿಸಿದೆ ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಶಾಸಕ ಗೋಪಾಲ್ ಭಂಡಾರಿ ಹೇಳಿದ್ದಾರೆ. ಟೆಲಿಫೋನ್ ಸೌಲಭ್ಯ ಸಾಮಾನ್ಯ ಜನರಿಗೂ ತಲುಪುವಂತಾಗಬೇಕು ಎಂದು ಡಾ. ಮೋಹನ್ ಆಳ್ವ ಹೇಳಿದರು.
(ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...