ಪಶ್ಚಿಮ ಘಟ್ಟದಲ್ಲಿ ವನ್ಯಜೀವಿ ಸಂಶೋಧನೆ ಮತ್ತು ರಕ್ಷಣಾ ಕೇಂದ್ರ ?
ಹಾಸನ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವನ್ಯಜೀವಿ ಸಂಶೋಧನಾ ಕೇಂದ್ರವನ್ನು ಸದ್ಯದಲ್ಲೇ ತರೆಯಲಾಗುವುದೆಂದು ಮೈಸೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ಎನ್. ಹೆಗ್ಡೆ ತಿಳಿಸಿದ್ದಾರೆ.
ವನ್ಯ ಜೀವಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಹಾಗೂ ಅವುಗಳ ಸಂರಕ್ಷಣೆಗಾಗಿ ಶಾಶ್ವತ ಕೇಂದ್ರವನ್ನು ಆರಂಭಿಸಲಾಗುವುದು. ಪ್ರಕೃತಿಗೆ ಸಂಬಂಧಿಸಿದಂತೆ ವಿಶ್ವದಲ್ಲಿಯೇ ಭಾರೀ ವೈವಿಧ್ಯತೆ ಹೊಂದಿದ ದೇಶ ಭಾರತವಾಗಿದೆ. ಈ ಹೆಗ್ಗಳಿಕೆಯನ್ನು ಕಾಪಾಡಿ ಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಹೆಗ್ಡೆ ಅಭಿಪ್ರಾಯ ಪಟ್ಟರು.
ಅವರು ಸಕಲೇಶಪುರದ ಬಿಸಲೆ ಅರಣ್ಯದ ನಡುವೆ ಇರುವ ಮಂಕನ ಹಳ್ಳಿ ಹೊಸಗದ್ದೆಯಲ್ಲಿ ಮೈಸೂರು ವಿವಿ ಆರಂಭಿಸಿರುವ ಹಾವುಗಳು ಹಾಗೂ ಕಪ್ಪೆಗಳ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ಥಳೀಯ ಜ್ಞಾನದ ಅಧ್ಯಯನಕ್ಕಾಗಿಯೇ ಯುಜಿಸಿಯು ಮೈಸೂರು ವಿವಿಗೆ 30 ಕೋಟಿ ರೂಪಾಯಿಯ ಯೋಜನೆಯಾಂದನ್ನು ಮಂಜೂರು ಮಾಡಲು ಒಪ್ಪಿಕೊಂಡಿದೆ. ಅದರಡಿಯಲ್ಲಿ ವನ್ಯ ಜೀವಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೆಗಡೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications