ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಫೆ.22ರಂದು ಹೃದ್ರೋಗ ಶಿಬಿರ
ಮಂಗಳೂರು : ಪ್ರಾರಂಭವಾಗಿ ಮೂರು ತಿಂಗಳಷ್ಟೇ ಕಳೆದಿರುವ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ಎಜೆಎಚ್‌ಆರ್‌ಸಿ) ಫೆಬ್ರವರಿ 22ರಂದು ಹೃದಯ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ.
ಹೆಸರಾಂತ ಹೃದ್ರೋಗ ತಜ್ಞ , ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯ ಹೃದ್ರೋಗ ಚಿಕಿತ್ಸಕ ಹಾಗೂ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಿದೆ ಎಂದು ಎಜೆಎಚ್‌ಆರ್‌ಸಿಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ ಮಾರ್ಲ ಸೋಮವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಇದೇ ತಿಂಗಳು ಹೃದಯ ಚಿಕಿತ್ಸೆ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸಾ ವಿಭಾಗವನ್ನು ತೆರೆಯುವ ಉದ್ದೇಶವಿದೆ. ಮಂಗಳೂರಿನಲ್ಲೇ ಪ್ರಥಮವಾದ ಟೆಲಿ ಕಾನ್ಫರೆನ್ಸಿಂಗ್ ವ್ಯವಸ್ಥೆ ನಮ್ಮ ಆಸ್ಪತ್ರೆಯಲ್ಲಿದೆ. ಇದರಿಂದ ಬೇರೆಡೆ ಇರುವ ವೈದ್ಯರ ಜೊತೆ ಸಂವಹ-ನ ಸಾಧ್ಯವಾಗಿದೆ. ಮಂಗಳೂರಿನಲ್ಲೇ ಮತ್ತೊಂದು ಪ್ರಥಮ-ನ್ಯೂಕ್ಲಿಯಾರ್ ಮೆಡಿಸಿನ್ ಇಲಾಖೆ. ಇದೂ ನಮ್ಮ ಆಸ್ಪತ್ರೆಯಲ್ಲಿ ಇದೇ ತಿಂಗಳ ಕೊನೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications