ಕಾಶ್ಮೀರಿಗಳು ಭಯೋತ್ಪಾದಕರಲ್ಲ, ಬಂಡುಕೋರರು- ಮುಷರ್ರಫ್‌ ಪ್ರತಿಪಾದನೆ

ಇಸ್ಲಮಾಬಾದ್‌ : ಭಾರತದ ಆಡಳಿತದಿಂದ ಕಾಶ್ಮೀರವನ್ನು ಮುಕ್ತಗೊಳಿಸಲು ಹೋರಾಡುತ್ತಿರುವವರು ಬಂಡುಕೋರರೇ ಹೊರತು ಭಯೋತ್ಪಾದಕರಲ್ಲ ಎಂದು ಪಾಕ್‌ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಆಚರಿಸಲಾಗುತ್ತಿರುವ ಕಾಶ್ಮೀರ್‌ ದಿವಸದ ಅಂಗವಾಗಿ ಮಂಗಳವಾರ ನೀಡಿದ ಸಂದೇಶದಲ್ಲಿ ಮುಷರ್ರಫ್‌ ಈ ಹೇಳಿಕೆ ನೀಡಿದ್ದಾರೆ. ಭಾರತದ ಆಧಿಪತ್ಯವನ್ನು ಕೊನೆಗೊಳಿಸಲು ಕಳೆದೊಂದು ದಶಕದಿಂದ ಕಾಶ್ಮೀರಿಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಇದಕ್ಕಾಗಿ ಪಾಕಿಸ್ತಾನವನ್ನು ದೂಷಿಸಲಾಗುತ್ತಿದೆ ಎಂದು ಮುಷರ್ರಫ್‌ ಹೇಳಿದರು.

ಕಾಶ್ಮೀರಿ ಬಂಡುಕೋರರನ್ನು ಭಯೋತ್ಪಾದಕರು ಎಂದು ಚಿತ್ರಿಸಲು ನವದೆಹಲಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಮುಷರ್ರಫ್‌, ಕಾಶ್ಮೀರಿಗಳಿಗೆ ಇಸ್ಲಮಾಬಾದ್‌ ನೀಡುತ್ತಿರುವ ರಾಜತಾಂತ್ರಿಕ, ರಾಜಕೀಯ ಹಾಗೂ ನೈತಿಕ ಬೆಂಬಲ ಯಾವತ್ತಿಗೂ ಕೊನೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಭಾರತದೊಂದಿಗೆ ಸೌಹಾರ್ದ ಹಾಗೂ ಘರ್ಷಣೆ ಮುಕ್ತ ಸಂಬಂಧವನ್ನು ಹೊಂದಬೇಕೆನ್ನುವುದು ಪಾಕಿಸ್ತಾನದ ಆಸೆ ಎಂದು ಪುನರುಚ್ಛರಿಸಿದ ಮುಷರ್ರಫ್‌, ಪಾಕ್‌ನೊಂದಿಗೆ ಮಾತುಕತೆಗೆ ಮುಂದಾಗುವಂತೆ ಭಾರತವನ್ನು ಮತ್ತೆ ಆಗ್ರಹಿಸಿದರು.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+