ಕಾರವಾರದಲ್ಲಿ ಫೆ.2ರಂದು ಮೂರು ದಿನಗಳ ಕರಾವಳಿ ಉತ್ಸವ ಆರಂಭ
ಕಾರವಾರ : ರಾಷ್ಟ್ರಮಟ್ಟದ ಕಲಾವಿದರನ್ನೊಳಗೊಂಡ ಮೂರು ದಿನಗಳ ಕರಾವಳಿ ಉತ್ಸವವು ಫೆಬ್ರವರಿ 2ರಿಂದ ಆರಂಭವಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ನಿಲಯ ಅಮಿತಾಶ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ಕರಾವಳಿ ಉತ್ಸವವು ಪ್ರಸಿದ್ಧ ಕಲಾವಿದರನ್ನು ಸ್ಥಳೀಯ ಜನರಿಗೆ ಪರಿಚಯಿಸಿದ ಸಾಂಸ್ಕೃತಿಕ ಹಬ್ಬ ಎಂದೇ ಜನಪ್ರಿಯವಾಗಿದೆ. ಈ ಅಗ್ಗಳಿಕೆಗೆ ಪೂರಕವಾಗಿ ಈ ಬಾರಿ ಅನುರಾಧ ಪೊದ್ವಾಳ್, ಕವಿತಾ ಕೃಷ್ಣ ಮೂರ್ತಿ, ಪಂಡಿತ್ ಶಿವಕುಮಾರ್ ಶರ್ಮಾ, ರಾಹುಲ್ ಶರ್ಮಾ, ಉಸ್ತಾದ್ ದಿಲ್ ಶಾದ್‌ಖಾನ್, ಬೇಗಮ್ ಪರ್ವೀನ್ ಸುಲ್ತಾನಾ, ಆನಂದ್ ಮುರ್ಡೇಶ್ವರ ಮುಂತಾದವರ ಕಾರ್ಯಕ್ರಮಗಿಳನ್ನು ಏರ್ಪಡಿಸಲಾಗಿದೆ.
ಉಡುಪಿಯ ಪ್ರಖ್ಯಾತ ಜಾದೂಗಾರ ಪ್ರೊ. ಶಂಕರ್ ಜಾದೂ ಅವರಿಂದ ಜಾದೂ ಪ್ರದರ್ಶನ ಕಾರ್ಯಕ್ರಮವಿದೆ ಎಂದು ಮಿತಾಶ ಹೇಳಿದರು. ಅಲ್ಲದೆ ಫೆಬ್ರವರಿ 5ರಂದು ನಾಗಪುರದ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದವರಿಂದ ಹಾಗೂ, ಆಂಧ್ರಪ್ರದೇಶ, ಛತ್ತೀಸ್‌ಘಡದ ಕಲಾವಿದರಿಂದ ಲಾವಣಿ, ಪಾಂಡವೀ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸುಮಾರು 17 ಲಕ್ಷರೂ ವೆಚ್ಚದಲ್ಲಿ ನಡೆಸುವ ಈ ಉತ್ಸವದಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂಬ ಭರವಸೆ ತಮ್ಮದು ಎಂದು ಮಿತಾಶ ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications