ಗಣರಾಜ್ಯೋತ್ಸವ ಶುಭಾಶಯ: ಶಾಂತಿಯಾತ್ರೆಗೆ ಮುಷರ್ರಫ್ ಆಹ್ವಾನ
ಇಸ್ಲಮಾಬಾದ್: ಶಾಂತಿ ಮಾತುಕತೆಗಳಿಗೆ ಬರಲು ಹಾಗೂ ಭಾರತ- ಪಾಕಿಸ್ತಾನ ಗಡಿ ಪ್ರದೇಶದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಭಾರತದ ಪ್ರಧಾನಿ ವಾಜಪೇಯಿ ಅವರನ್ನು ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಅವರು ತಮ್ಮ ಗಣರಾಜ್ಯೋತ್ಸವ ಸಂದೇಶದಲ್ಲಿ ಶನಿವಾರ ಒತ್ತಾಯಿಸಿದ್ದಾರೆ.
ಭಾರತದೊಂದಿಗೆ ಪಾಕಿಸ್ತಾನ ಸೌಹಾರ್ದ ಸಂಬಂಧ ಬಯಸುತ್ತದೆ. ಉಭಯ ದೇಶಗಳು ಮಾತುಕತೆ ನಡೆಸುವ ಮೂಲಕ ಪ್ರಗತಿ ಹಾಗೂ ಶಾಂತಿಯತ್ತ ಪ್ರಯಾಣ ಬೆಳೆಸಬೇಕಿದೆ ಎಂದು ಮುಷರ್ರಫ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿ ಹಾಗೂ ಭಾರತದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಪಾಕಿಸ್ತಾನ ಭಾರತದೊಂದಿಗೆ ಸೌಹಾರ್ದ ಹಾಗೂ ಉದ್ವಿಗ್ನ ರಹಿತ ಸಂಬಂಧ ಬಯಸುತ್ತದೆ ಎಂದು ಮುಷರ್ರಫ್ ಹೇಳಿರುವುದಾಗಿ ಅಫಿಶಿಯಲ್ ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ ವರದಿ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications