45 ಲಕ್ಷ ಹೆಕ್ಟೇರ್ ಭೂಮಿಗೆ ನೀರು, ರಾಜ್ಯ ಸರ್ಕಾರದಿಂದ ‘ಜಲ ನೀತಿ’
ಬೆಂಗಳೂರು: ಸಣ್ಣ, ಮಧ್ಯಮ ಹಾಗೂ ಬೃಹತ್ ನೀರಾವರಿ ಯೋಜನೆಗಳಡಿ 45 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುವ ಸಲುವಾಗಿ ರಾಜ್ಯ ಸರ್ಕಾರ ಜಲ ನೀತಿಯನ್ನು ರೂಪಿಸುವುದೆಂದು ರಾಜ್ಯಪಾಲೆ ವಿ.ಎಸ್. ರಮಾದೇವಿ ಹೇಳಿದ್ದಾರೆ.
2001-02 ನೇ ಅವಧಿಯಲ್ಲಿ ಬಹಳಷ್ಟು ಮಧ್ಯಮ ಹಾಗೂ ಬೃಹತ್ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಸೋಮವಾರ ಆರಂಭವಾದ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಮಾದೇವಿ ಹೇಳಿದರು.
ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು :
- 16 ಲಕ್ಷ ಹೆಕ್ಟೇರ್ ಭೂಮಿಗೆ ಅಂತರ್ಜಲ ಮೂಲಕ ನೀರುಣಿಸಲಾಗುವುದು.
- ಬೆಳಗಾವಿ ಜಿಲ್ಲೆಯ ಹರಿನಾಲಾ, ಹಾಸನ ಜಿಲ್ಲೆಯ ಯಗಚಿ, ಗುಲ್ಬರ್ಗಾ ಜಿಲ್ಲೆಯ ಮುಲ್ಲಾಮರಿ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ.
- ಜಲ ಸಂವರ್ಧನೆ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ವೃದ್ಧಿ . ಈ ಯೋಜನೆಗೆ ವಿಶ್ವಬ್ಯಾಂಕ್‌ನಿಂದ 995 ಕೋಟಿ ರುಪಾಯಿ ನೆರವು ಕೇಳಲಾಗಿದೆ.
- ವಿಶ್ವಬ್ಯಾಂಕ್‌ಗೆ ತನ್ನ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟಿರುವ ಕರ್ನಾಟಕ 762 ಮಿಲಿಯನ್ ಡಾಲರ್ ಸಾಲ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ - ಕರ್ನಾಟಕ ಆರ್ಥಿಕ ಪುನರ್ರಚನೆ ಕಾರ್ಯಕ್ರಮ(150 ಮಿ.ಡಾ), ರಾಜ್ಯ ಹೆದ್ದಾರಿಗಳ ಅಭಿವೃದ್ಧಿ (360 ಮಿ.ಡಾ.), ವಾಟರ್‌ಷೆಡ್ ಅಭಿವೃದ್ಧಿ (100 ಮಿ.ಡಾ.), ಗ್ರಾಮೀಣ ನೀರು ಸರಬರಾಜು ಮತ್ತು ಒಳ ಚರಂಡಿ ಯೋಜನೆ- 2 ನೇ ಹಂತ(152 ಮಿ.ಡಾ.) ಸೇರಿವೆ.
- ಮೂರು ವರ್ಷಗಳಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣ.
- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಪ್ರೋ-ಯೂರಾಲಜಿ ಕೇಂದ್ರ ಸ್ಥಾಪಿಸಿಲು, ಹಾಗೂ ಸುಟ್ಟ ಗಾಯಗಳಿಗೆ ಚರ್ಮ ಕಸಿ ಮಾಡುವ ಅತ್ಯಾಧುನಿಕ ಕೇಂದ್ರವನ್ನು ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.
- 2001 ನೇ ಇಸವಿಯಲ್ಲಿ ರಾಜ್ಯ ಸರ್ಕಾರ 2.2 ಲಕ್ಷ ಮನೆಗಳನ್ನು ನಿರ್ಮಿಸಿದೆ.
ಇದನ್ನೂ ಓದಿ..
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications