Get Updates
Get notified of breaking news, exclusive insights, and must-see stories!

ಪತ್ರಕರ್ತರು ಮಾಧ್ಯಮ ಭಯೋತ್ಪಾದಕರು : ಎಸ್‌.ಎಂ.ಕೃಷ್ಣ

ಬೆಂಗಳೂರು : ಸ್ಫೋಟಕ ಸುದ್ದಿಗಳನ್ನು ಪ್ರಕಟಿಸುವ ಭರದಲ್ಲಿ ಪತ್ರಕರ್ತರು ಮಾಧ್ಯಮ ಭಯೋತ್ಪಾದಕರಾಗಿಬಿಟ್ಟಿದ್ದಾರೆ. ಇದೊಂದು ಭಯಾನಕ ಟ್ರೆಂಡ್‌ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿಷಾದಿಸಿದ್ದಾರೆ.

ಹಿರಿಯ ಪತ್ರಕರ್ತ ಇ.ಆರ್‌.ಸೇತೂರಾಂ ಅವರಿಗೆ 2001ನೇ ಸಾಲಿನ ಟಿಎಸ್ಸಾರ್‌ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸೋಮವಾರ ಈ ಮಾತುಗಳು ಹೊರಬಿದ್ದವು. ಇವತ್ತು ಯಾವುದೇ ವೃತ್ತಿಯಿರಲಿ, ಕೆಲವು ಬ್ಲ್ಯಾಕ್‌ಶೀಪ್‌ಗಳು ಆ ವೃತ್ತಿಗೇ ಕಳಂಕ ತರುತ್ತಿವೆ. ಇದು ಪತ್ರಿಕೋದ್ಯಮವನ್ನೂ ಆವರಿಸಿರುವುದು ಖೇದಕರ ಎಂದರು.

ಮೈನವಿರೇಳಿಸುವಂತೆ ಸುದ್ದಿಯನ್ನು ಕೊಡುವುದೇ ಪರಮ ಗುರಿಯಾದಾಗ ಅಭಾಸಗಳಾಗುತ್ತವೆ. ಆಗಿರುವುದೇ ಒಂದು, ಜನರಿಗೆ ಹೇಳುವುದು ಇನ್ನೊಂದು. ಪತ್ರಕರ್ತರಿಗೆ ಸಾಕಷ್ಟು ಶೈಕ್ಷಣಿಕ ಅರ್ಹತೆ ಹಾಗೂ ವೃತ್ತಿಪರತೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಅಗತ್ಯ ಇವತ್ತಿನ ಸನ್ನಿವೇಶದಲ್ಲಂತೂ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಇದೇ ಸಮಾರಂಭದಲ್ಲಿ ಬೆಂಗಳೂರು ಆಕಾಶವಾಣಿಯ ನಿವೃತ್ತ ಫಾರಂ ರೇಡಿಯೋ ಅಧಿಕಾರಿ ಎಂ.ಟಿ.ಜಯಣ್ಣ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪತ್ರಕರ್ತರಾದ ಶ್ರೀನಿವಾಸ ಸಿರನೂರ್‌ಕರ್‌ ಮತ್ತು ಎಸ್‌.ಗಿರಿಜಾ ಶಂಕರ್‌ಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+