ಗದಗ ಬಳಿ ಕೋಮು ಸಂಘರ್ಷ, ಇರಿತ, ಉದ್ವಿಗ್ನ ಪರಿಸ್ಥಿತಿ

ಗದಗ: ಎರಡು ಕೋಮುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಪ್ರಕೋಪಕ್ಕೆ ತಿರುಗಿ, ವ್ಯಕ್ತಿಯಾಬ್ಬನನ್ನು ಇರಿದ ಘಟನೆ ಇಲ್ಲಿಗೆ ಸಮೀಪದ ಹೊಳೆ ಆಲೂರಲ್ಲಿ ನಡೆದಿದೆ. ಇದರಿಂದಾಗಿ ಸೋಮವಾರ ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನೂ ಸೋಮವಾರ ಮುಚ್ಚಲಾಗಿತ್ತು. ಊರಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮುಂಜಾಗರೂಕತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಪಸಂಖ್ಯಾಕ ವರ್ಗದ ನಾಯಕರೊಬ್ಬರು ಸ್ಥಳೀಯ ಸಂಘದ ಕಾರ್ಯವೈಖರಿ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದೇ ಗಲಭೆಗೆ ಕಾರಣ ಎನ್ನಲಾಗಿದೆ. ಭಾನುವಾರ ರಾತ್ರಿ ಆ ನಾಯಕ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸ್ಥಳೀಯ ಮುಖಂಡರು ಆಗ್ರಹಿಸಿದ ಸಂದರ್ಭದಲ್ಲಿ ಹಲ್ಲೆ, ಪ್ರತಿ ಹಲ್ಲೆ ನಡೆದು ಪರಿಸ್ಥಿತಿ ಹದಗೆಟ್ಟಿತು ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ತಮ್ಮ ಮುಖಂಡನ ಮೇಲೆ ಹಲ್ಲೆ ನಡೆಯಿತು ಎಂಬ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾಕ ನಾಯಕರು, ಪೊಲೀಸರಿಗೆ ದೂರಿತ್ತರು. ಊರಿಗೆ ಧಾವಿಸಿದ ಪೊಲೀಸರು ಗಲಭೆ ನಿಯಂತ್ರಿಸಲು ಒಂದು ಸುತ್ತಿನ ಲಾಠಿ ಪ್ರಹಾರ ನಡೆಸಿದರು.

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+