ನೆಲಮಂಗಲ ಸಮೀಪ ಲಾರಿ- ವ್ಯಾನ್ ಡಿಕ್ಕಿ, ನಾಲ್ವರ ದುರ್ಮರಣ
ಬೆಂಗಳೂರು : ನೆಲಮಂಗಲ ಬಳಿ ಸಂಭವಿಸಿರುವ ವ್ಯಾನ್ ಹಾಗೂ ಲಾರಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವ್ಯಾನ್ ಹಾಗೂ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಲಾರಿ ಸೋಮವಾರ ಮಧ್ಯರಾತ್ರಿ ಡಿಕ್ಕಿ ಹೊಡೆದಾಗ ವ್ಯಾನ್ ಡ್ರೆೃವರ್ ಸೇರಿದಂತೆ ನಾಲ್ವರು ಮೃತರಾದರು. ಮೂವರು ಸ್ಥಳದಲ್ಲೇ ಮೃತರಾದರೆ, ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವಿಗೀಡಾದ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿಗೀಡಾದವರ ಬಗೆಗಿನ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications