ಡಿ.25ರಂದು 2ಕೆ1 ಹೆಸರಿನಲ್ಲಿ ಗೊರೂರು ಸ್ಮರಣೆಹಾಸ್ಯೋತ್ಸವ

ಬೆಂಗಳೂರು : ನಗೆ ಬರಹಗಾರರ ವೇದಿಕೆಯಾದ ‘ಹಾಸ್ಯಬ್ರಹ್ಮ’ ಹಾಗೂ ‘ಕೊರವಂಜಿ- ಅಪರಂಜಿ ಟ್ರಸ್ಟ್‌’ಗಳ ಸಂಯುಕ್ತಾಶ್ರಯದಲ್ಲಿ ಡಿ.25ರಂದು ಹಾಸ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಸ್ಮರಣಾರ್ಥ ನಡೆಯಲಿರುವ ಈ ಕಾರ್ಯಕ್ರಮದ ಹೆಸರು ಹಾಸ್ಯೋತ್ಸವ -2ಕೆ1.

25ರ ಮಂಗಳವಾರ ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಜವಾಹರಲಾಲ್‌ ತಾರಾಲಯದ ನಿರ್ದೇಶಕ ಸಿ.ವಿ. ವಿಶ್ವೇಶ್ವರ ಅವರು ಉದ್ಘಾಟಿಸಲಿದ್ದಾರೆ. ಈ ವಿಷಯವನ್ನು ಕೃಷ್ಣ ಸುಬ್ಬರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್‌ಮಸ್‌ದಿನದಂದು ಬೆಳಗ್ಗೆ ಹತ್ತೂವರೆಗೆ ಆರಂಭವಾಗುವ ಈ ಕಾರ್ಯಕ್ರಮ ಸಂಜೆ 5 ಗಂಟೆಯವರೆಗೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಡಾ. ಪಿ.ಎಸ್‌. ರಾಮಾನುಜಂ, ಅ.ರಾ. ಮಿತ್ರ ಅವರು ನಗೆಯಡುಗೆ ಬಡಿಸಿದರೆ, ಗಾಯಕ ರಾಜು ಅನಂತಸ್ವಾಮಿ ಹಳ್ಳಿಯ ಹಾಡುಗಳನ್ನು ಹಾಡಿ ನಗುವಿನ ಅಮೃತ ಧಾರೆಯನ್ನೇ ಕುಡಿಸಲಿದ್ದಾರೆ ಎಂದು ಗೋಷ್ಠಿಯಲ್ಲಿ ಹಾಜರಿದ್ದ ಎಂ. ಶಿವಕುಮಾರ್‌ ಹೇಳಿದರು.

ಇದಲ್ಲದೆ ಗೊರೂರರ ಬಿಸಿಲ್ಗುದುರೆಯು ಎಸ್‌. ರಾಮಮೂರ್ತಿ ಅವರ ನೇತೃತ್ವದಲ್ಲಿ ಓಡಲಿದೆ. ಇದರೊಂದಿಗೆ ರಂಗಗೀತೆಗಳು, ಹಾಸ್ಯ ಲಾಸ್ಯ ಎಲ್ಲವೂ ಈ ಕಾರ್ಯಕ್ರಮದಲ್ಲಿ ಅಡಕವಾಗಿದೆ.

(ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+