ಬೆಂಗಳೂರಲ್ಲಿ ಅಪಘಾತ : ಇಬ್ಬರು ಶಾಲಾ ಮಕ್ಕಳು, ಶಿಕ್ಷಕಿ ಸಾವು
ಬೆಂಗಳೂರು : ಶನಿವಾರ ಮುಂಜಾನೆ ನಗರದಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಶಾಲೆಯಾಂದರ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕಿ ಮೃತಪಟ್ಟಿದ್ದಾರೆ.
ನಗರದ ಕಾವೇರಿ ಶಾಲೆಯ ಮಕ್ಕಳು ಈ ಬಸ್‌ನಲ್ಲಿ ಮೈಸೂರಿಗೆ ಪ್ರವಾಸ ಹೊರಟಿದ್ದರು. ಚಂದ್ರಾ ಲೇ ಔಟ್ ಬಳಿ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ. 20 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿ ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದರು. ಮೃತರನ್ನು ಮೌನಶ್ರೀ (13), ಮೈತ್ರಿ (15) ಹಾಗೂ ಅನ್ನಪೂರ್ಣ (32) ಎಂದು ಗುರುತಿಸಲಾಗಿದೆ.
ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಈತನ ಬದಲಿಗೆ ಕ್ಲೀನರ್ ಬಸ್ಸನ್ನು ಓಡಿಸುತ್ತಿದ್ದುದರಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.
(ಪಿಟಿಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications