ಹಾಸನ ಮತ್ತು ಚಿತ್ರದುರ್ಗದಲ್ಲಿ ರಸ್ತೆ ಅಪಘಾತ : 7 ಸಾವು

ಬೆಂಗಳೂರು : ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಶುಕ್ರವಾರ ಸಂಭವಿಸಿದ ಎರಡು ಅಪಘಾತಗಳಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ತುರುವನೂರು ಬಳಿಯ ಬೊಗಳೇರಹಟ್ಟಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿ ಮತ್ತು ಜೀಪ್‌ ನಡುವೆ ಸಂಭವಿಸಿದ ಡಿಕ್ಕಿಯಿಂದ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಹುಲ್ಲೂರಿನ ವೀರಣ್ಣ (45), ಬುರುಜನಹಟ್ಟಿಯ ಪುರುಷೋತ್ತಮ್‌ (25), ಎನ್‌.ಪಾಂಡು ಮತ್ತು ಮಲ್ಲಿಕಾರ್ಜುನ್‌ (40) ಇವರೇ ಮೃತಪಟ್ಟವರು. ಜೀಪ್‌ನಲ್ಲಿದ್ದ ಇವರೆಲ್ಲ ದಾಸಪ್ಪ ಕಂಪನಿಯ ಕಾರ್ಮಿಕರು.

ಹಾಸನದ ಶಾಂತಿಗ್ರಾಮದ ಬಳಿ ಝೆನ್‌ ಕಾರೊಂದು ಲಾರಿಗೆ ಡಿಕ್ಕಿ ಹೊಡೆದು, ಬೆಂಗಳೂರಿನ ಮೂವರು ಯುವಕರು ಸತ್ತಿದ್ದಾರೆ. ದಿಲೀಪ್‌ (24), ಪ್ರವೀಣ್‌ (25) ಹಾಗೂ ಪ್ರದೀಪ್‌ (24) ಮೃತಪಟ್ಟವರು. ಗಾಯಗೊಂಡಿರುವ ಶ್ರೀಕಾಂತ್‌ ಎಂಬುವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನ ಮೈಕೋ ಬಡಾವಣೆಯ ನಿವಾಸಿಗಳಾದ ಇವರು ಕುದುರೆಮುಖಕ್ಕೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+