ಕೋಟಿ ಚಿಣ್ಣರ ಚುರುಮತಿಗಳಾಗಿಸುವುದು ನನ್ನ ಗುರಿ- ಎಪಿಜೆ ಕ-ಲಂ
ಮಂಗಳೂರು : ದೇಶದಲ್ಲಿ ಜ್ಞಾನಾಧಾರಿತ ಸಮಾಜ ಹುಟ್ಟುಹಾಕುವ ತ್ವರಿತ ಅಗತ್ಯ ನಮ್ಮ ಮುಂದಿದೆ ಎಂದು ಕನಸುಗಾರ ಹಾಗೂ ಚುರುಕು ವಿಜ್ಞಾನಿ, ಪ್ರಧಾನಿಯ ಮಾಜಿ ವೈಜ್ಞಾನಿಕ ಸಲಹೆಗಾರ ಎಪಿಜೆ ಕ-ಲಂ ಹೇಳಿದ್ದಾರೆ.
ಸೂರತ್‌ಕಲ್‌ನಲ್ಲಿ ಮಂಗಳವಾರ ಐ.ಸಿ.ಎಂಜಿನ್‌ಗಳು ಮತ್ತು ಉಷ್ಣ ವಿಕಸನ (ಐಸಿಇಸಿ- 2001) ಕುರಿತ 17ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಕೃಷಿ, ಕೈಗಾರಿಕೆ, ಮಾಹಿತಿ ಮೊದಲಾದ ಕ್ಷೇತ್ರಗಳ ವಿಕಾಸಕ್ಕೆ ಜ್ಞಾನ ತೃಷೆ ಅತಿ ಮುಖ್ಯ. ಈ ಎಲ್ಲಾ ಕ್ಷೇತ್ರಗಳೂ ಜ್ಞಾನಾಧಾರಿತವಾದಲ್ಲಿ ಆಕಾಶಕ್ಕೆ ಮೂರೇ ಗೇಣು ಅನ್ನುವಷ್ಟರ ಮಟ್ಟಿಗೆ ಏರುವುದು ಸಾಧ್ಯ ಎಂದು ಸುದ್ದಿಗಾರರಿಗೆ ಕ-ಲಂ ತಮ್ಮ ಅಭಿಪ್ರಾಯ ಹೇಳಿಕೊಂಡರು.
ವೈಜ್ಞಾನಿಕ ಸಲಹೆಗಾರನ ಪದ ಬಿಟ್ಟ ನಂತರ ಹೈಸ್ಕೂಲಿನ ಮಕ್ಕಳ ಮನಸ್ಸನ್ನು ಕೆಣಕುವ ಕೆಲಸಕ್ಕೆ ಕೈಹಾಕಿದ್ದೇನೆ. ಈ ಪುಟ್ಟ ಮನಸ್ಸುಗಳನ್ನು ಚುರುಕಾಗಿಸುವುದು ನನ್ನ ಕನಸು. ಈಗಾಗಲೇ 16 ಸಾವಿರ ಮಕ್ಕಳನ್ನು ಭೇಟಿಯಾಗಿದ್ದೇನೆ. ಮುಂದಿನ ವರ್ಷ ಆಗಸ್ಟ್ 2001ರಿಂದ 2003ರ ಅವಧಿಯಲ್ಲಿ ಒಂದು ಕೋಟಿ ವಿದ್ಯಾರ್ಥಿಗಳನ್ನು ಚುರುಕುಮತಿಗಳನ್ನಾಗಿಸುವುದು ನನ್ನ ಗುರಿ ಎಂದರು.
ಇದಕ್ಕೂ ಮುಂಚೆ ಪ್ರಸ್ತಾವಿಕವಾಗಿ ಮಾತನಾಡಿ, ಐ.ಸಿ. ಎಂಜಿನ್‌ಗಳು ಮತ್ತು ಉ,್ಣ ವಿಕಾಸ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವಂತೆ ಹಾಗೂ ಪರಿಸರ ಮಿತ್ರ ಎಂಜಿನ್ನುಗಳನ್ನು ತಯಾರಿಸುವಂತೆ ಕೈಗಾರಿಕೋದ್ಯಮಿಗಳಿಗೆ ಕರೆ ಕೊಟ್ಟರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications