ಸಂಸತ್ ಮೇಲೆ ದಾಳಿ : ಬೇಲೂರು, ಹಳೇಬೀಡಿಗೂ ತಟ್ಟಿದ ಬಿಸಿ
ಹಾಸನ : ಕಳೆದ ವಾರ ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಿಸಿ ಶಿಲ್ಪಕಲಾ ದೇಗುಲಗಳ ತಾಣವಾದ ಹಾಸನ ಜಿಲ್ಲೆಗೂ ತಟ್ಟಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಹಾಗೂ ಗೊರೂರು ಜಲಾಶಯಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ವಿಶ್ವ ವಿಖ್ಯಾತ ಬೇಲೂರು ಹಳೇಬೀಡು ದೇವಾಲಯಗಳ ಪ್ರವೇಶ ದ್ವಾರದಲ್ಲೇ ಲೋಹ ಶೋಧಕ ಯಂತ್ರಗಳನ್ನು ಅಳವಡಿಸಲಾಗಿದೆ. ದೇವಾಲಯಕ್ಕೆ ಬರುವ ಪ್ರತಿಯಾಬ್ಬ ಪ್ರವಾಸಿಗರನ್ನೂ ಕೂಲಂಕಷವಾಗಿ ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ.
ಜಿಲ್ಲೆಯ ಪ್ರಖ್ಯಾತ ಗೊರೂರು ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ದೆಹಲಿಯ ಸಂಸತ್ ಭವನದ ಮೇಲೆ ವಿಧ್ವಂಸಕ ದಾಳಿ ನಡೆದ ಹಿನ್ನೆಲೆಯಲ್ಲಿ ಎಲ್ಲ ಸಾರ್ವಜನಿಕ ಕಟ್ಟಡಗಳು ಹಾಗೂ ಜಲಾಶಯಗಳಿಗೆ ಬಿಗಿಭದ್ರತೆ ಒದಗಿಸುವುದು ಅನಿವಾರ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications