ಮಳ್ಳೂರು ಘಾಟ್‌ಗೆ ಬಸ್ ಉರುಳಿ 20 ಮಂದಿ ದುರ್ಮರಣ
ರಾಮದುರ್ಗ: ಇಲ್ಲಿಗೆ ಸಮೀಪದ ಮಳ್ಳೂರು ಘಾಟ್‌ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಸೋಮವಾರ ಸಂಜೆ ಉರುಳಿಬಿದ್ದಿದ್ದು , 20 ಮಂದಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಗಾಯಗೊಂಡಿರುವ 45 ಮಂದಿಯನ್ನು ರಾಮದುರ್ಗದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಗುಲಬರ್ಗಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 200 ಅಡಿಗೂ ಹೆಚ್ಚು ಆಳದ ಕಂದಕಕ್ಕೆ ಬಿತ್ತೆಂದು ಪ್ರತ್ಯಕ್ಷದರ್ಶಿಯಾಬ್ಬರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ರಾಮದುರ್ಗ ಹಾಗೂ ಸವದತ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿದರೂ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ವಿಳಂಬವಾಯಿತು.
ಮುಳ್ಳುಕಂಟಿಗಳ ನಡುವೆ ಸಿಲುಕಿದ್ದ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ಕೂಡ ತ್ರಾಸದಾಯಕವಾಗಿ ಪರಿಣಮಿಸಿತು. ಪ್ರಾಣ ಭಯದಿಂದ ಬಸ್‌ನಿಂದ ಹೊರಗೆ ಜಿಗಿದಿರುವ ಕೆಲವು ಪ್ರಯಾಣಿಕರು ಕಲ್ಲಿಗೆ ಅಪ್ಪಳಿಸಿ ಮೃತರಾಗಿದ್ದಾರೆ. ಸತ್ತವರ ಹೆಸರು ವಿಳಾಸಗಳ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications